ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ 11 ಜನರ ಬಂಧನ

IMG20250711141837.jpg
Published on

ಬೆಳಗಾವಿ: ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಪ್ರತ್ಯೇಕ ಆರು ಪ್ರಕರಣಗಳಲ್ಲಿ 11 ಜನ ಆರೋಪಿತರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಬಾಗೇವಾಡಿ ಪೊಲೀಸ್ ಠಾಣೆಯ ಶರಣಮಟ್ಟಿ ಕ್ರಾಸ್ ಬಳಿ ಗಾಂಜಾ ಸಾಗಿಸುತ್ತಿದ್ದ ಬೈಲಹೊಂಗಲ ಶಿಗೇಹಳ್ಳಿ ಗ್ರಾಮದ ನಿವಾಸಿ ಮಂಜುನಾಥ ಕುರೇರನನ್ನು ವಶಕ್ಕೆ ಪಡೆದು 2,066 ಕೆಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿ ರಾಜು ಪರಶುರಾಮ ಉಚಗಾಂವಕರ, ಹನುಮಂತ ಪರಶುರಾಮ ಪಾಟೀಲ ಇವರನ್ನು ವಶಕ್ಕೆ ಪಡೆದು 1,066 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.

ಇನ್ನೊಂದು ದಾಳಿಯಲ್ಲಿ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಜಾರ ಹುಸೇನಸಾಬ ಸೊಲ್ಲಾಪುರೆ, ಮುಸ್ತಾಕ ಹಜರತಬಾಯಿ ಮಕಾಂದಾರನನ್ನು ಬಂಧಿಸಿದ್ದಾರೆ.

ಮಟಕಾ ಅಡ್ಡೆ ಮೇಲೆ ದಾಳಿ:

ನಗರದ ಖಂಜಾರ ಗಲ್ಲಿಯಲ್ಲಿ ಮಟಕಾದಲ್ಲಿ ತೊಡಗಿದ್ದ ಮೊಹ್ಮದಶಪಿ ಮೋದಿನಸಾಬ್ ತಹಸೀಲ್ದಾರ್, ಪರುಶುರಾಮ ಅಪ್ಪಾಜಿ ಹೊಸಕೋಟಿ, ಪ್ರಕಾಶ ತುಕಾರಾಮ ಪಾಟೀಲ, ರಫಿಕ್ ಹುಸೇನಸಾಬ್ ಮುಲ್ಲಾ, ಅಮ್ಮಾದಖಾನ ಪಠಾಣನನ್ನು ಬಂಧಿಸಲಾಗಿದೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ನೊಂದು ದಾಳಿಯಲ್ಲಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ಬಳಿ ಮಟಕಾ ದಂಧೆಯಲ್ಲಿ ತೊಡಗಿದ್ದ ರಾಜು ಯಲ್ಲಪ್ಪ ನಾಯಿಕ ಎಂಬಾತನನ್ನು ಬಂಧಿಸಲಾಗಿದೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net