11 ಜೂಜುಕೋರರ ಬಂಧನ, ನಗದು ವಶ

Arrest Kaidhi
Published on

ಬೆಳಗಾವಿ: ಮಟ್ಕಾ ಅಡ್ಡೆ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದ ಮಾರ್ಕೆಟ್ ಠಾಣೆ ಪೊಲೀಸರು 11 ಜೂಜುಕೋರರನ್ನು ಬಂಧಿಸಿದ್ದಾರೆ. ಅಲ್ಲದೆ, 8 ಮೊಬೈಲ್ ಸೇರಿದಂತೆ 27,320 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಕಾಕತಿಯ ಸರ್ಫರಾಜ್ ಶಹಾಪುರ(21), ಖಾಸಬಾಗದ ದಶರಥ ಕಾಂಬಳೆ(40), ಶಹಾಪುರದ ಪ್ರಕಾಶ ಮಲಸೂರೆ(64), ರೈತಗಲ್ಲಿಯ ಬಸವರಾಜ ಪಾಟೀಲ (38), ಮಾಣಿಕಬಾಗದ ಮಧು ನಾಯಕ(40), ಶುಕ್ರವಾರ ಪೇಟೆಯ ಅಕ್ಷಯ ಸಾಳುಂಕೆ (24), ಕಡೋಲ್ಕರ್ ಗಲ್ಲಿಯ ಅರ್ಜುನ ಜಕ್ಕಪ್ಪಣ್ಣವರ(28), ವೀರಭದ್ರನಗರದ ಖಾಜಾಹುಸೇನ ಘೋರಿ (38), ಸಮರ್ಥ ನಗರದ ಆನಂದ ವೆಂಕಟಪುರ (20), ಫುಲಬಾಗದ ವಸಂತ ನಾಯ್ಕ (38), ರಾಮತೀರ್ಥ ನಗರದ ಚಂದ್ರಶೇಖರ ವೆಂಕಣ್ಣವರ (39) ಬಂಧಿತರು.

ಈ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net