ಹಲಗನಹಳ್ಳಿ ಸೊಸೈಟಿಗೆ 11 ನಿರ್ದೇಶಕರ ಆಯ್ಕೆ

09BTP02 Congress
ಹಲಗನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಸಂಭ್ರಮ ವ್ಯಕ್ತಪಡಿಸಿದರು.
Published on

ಬೆಟ್ಟದಪುರ: ಬೆಟ್ಟದಪುರ ಸಮೀಪದ ಹಲಗನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಯವರೆಗೆ ಸಾಲಗಾರರ ಕ್ಷೇತ್ರ ಮತ್ತು ಸಾಲಗಾರರಲ್ಲದ ಕ್ಷೇತ್ರಕ್ಕೆ ನಿರ್ದೇಶಕರ ಚುನಾವಣೆ ಇತ್ತೀಚೆಗೆ ನಡೆಯಿತು.

ಸಂಘದ 12 ಸ್ಥಾನಗಳ ಪೈಕಿ 11 ಸ್ಥಾನಕ್ಕೆ ಚುನಾವಣೆ ನಡೆದು, ಪರಿಶಿಷ್ಟ ಪಂಗಡ ಮೀಸಲು ಒಂದು ಸ್ಥಾನವು ಖಾಲಿಯಾಗಿ ಉಳಿದಿದೆ.

ತೀವ್ರ ಕುತೂಹಲ ಕೆರಳಿಸಿದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆರು ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ನೂತನ ನಿರ್ದೇಶಕರಾಗಿ ಆಯ್ಕೆಯಾದರು.

ನಿರ್ದೇಶಕರಾದ ರಹಮತ್ ಉಲ್ಲಾ, ಸೈಯದ್ ಹಸೀಬ್, ನಾಸಿರ್ ಪಾಷ, ಸುಭಾನ್ ಅಹಮ್ಮದ್, ನಯಾಜ್ ಪಾಷ, ಮುಕ್ತಾರ್ ಅಲೀಂ ಷರೀಫ್, ಎಸ್.ಎ ಕುಮಾರ, ಶಿವಣ್ಣ, ಗುಲ್ನಜ್ ಬಾನು, ಯಾಸ್ಮಿನ್ ತಾಜ್, ಸಾಲಗಾರರಲ್ಲದ ಕ್ಷೇತ್ರದಿಂದ ಖಾಸೀಫ್ ಖಾನ್ ಗೆಲುವು ಸಾಧಿಸಿದರು. ಚುನಾವಣಾಧಿಕಾರಿಯಾಗಿ ಗಿರೀಶ್ ಹಾಗೂ ತಂಡದವರು ಕಾರ್ಯನಿರ್ವಹಿಸಿದರು.

ಎರಡು ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು. ಬೆಟ್ಟದಪುರ ಪಿಎಸ್‌ಐ ಅಜಯ್ ಕುಮಾರ್ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು.

ಮುಖಂಡರಾದ ಶಂಕರೇಗೌಡ, ಅತ್ತರ್ ಮತಿನ್, ಸೈಯದ್ ಸುಹೇಲ್, ವಿದ್ಯಾಶಂಕರ್, ರವಿಕುಮಾರ್, ಇರ್ಫಾನ್ ಅಹಮದ್, ನಫೀಸ್ ಖಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದಿಲ್ ಖಾನ್ ಹಾಗೂ ಸಂಘದ ಸಿಬ್ಬಂದಿ ಸೇರಿದಂತೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net