11 ಅಂಗವಿಕಲರಿಗೆ ಕೃತಕ ಕಾಲು ಜೋಡಣೆ

h15-limb
Published on

ಹುಬ್ಬಳ್ಳಿ: ಮಹಾರಾಜ ಅಗ್ರಸೇನ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ಮತ್ತು ಆಲ್ ಇಂಡಿಯಾ ಜೈನ್ ಯುಥ್ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್ ಆಶ್ರಯದಲ್ಲಿ ಇಲ್ಲಿಯ ಕೆಎಂಸಿಆರ್‌ಐನ ಮಹಾವೀರ ಲಿಂಬ್ ಸೆಂಟರ್‌ನಲ್ಲಿ ಶನಿವಾರ 11 ಅಂಗವಿಕಲರಿಗೆ ಉಚಿತ ಕೃತಕ ಕಾಲು ಜೋಡಣಾ ಶಿಬಿರ ಏರ್ಪಡಿಸಲಾಗಿತ್ತು.
ಲಿಂಬ್ ಸೆಂಟರ್ ಅಧ್ಯಕ್ಷ ಮಹೇಂದ್ರ ಸಿಂಘಿ ಮಾತನಾಡಿ, ಅಂಗವಿಕಲರ ಬಾಳಿಗೆ ಬೆಳಕಾಗುವಂತಹ ಕಾರ್ಯಕ್ರಮ ಇದು. ಸಂತೋಷ ಮತ್ತು ಸ್ವಾಭಿಮಾನದಿಂದ ಹೆಜ್ಜೆ ಇಟ್ಟು ನಡೆಯಬೇಕು ಎಂದು ಸಲಹೆ ನೀಡಿದರು.
ಮಹಾರಾಜ ಅಗ್ರಸೇನ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ಚೇರ್ಮನ್ ಸುಜಿತ್ ಯಾದುಕ, ಉಪಚೇರ್ಮನ್ ಕೇದಾರ ಅಗರವಾಲ, ನಿರ್ದೇಶಕರಾದ ಸುಭಾಷ ಮಹಾಜನ, ಸುರೇಶ ಅಗರವಾಲ, ಅಮಿತ ಮಹಾಜನ, ಗೌತಮ ಗುಲೇಚ್ಛಾ, ಮುಖೇಶ ಅಗರವಾಲ, ಭಾರತಿ ಅಗರವಾಲ, ಅಶೋಕ ಕುಮಾರ ಮಹಾಜನ, ಹೇಮಂತ ಮೋಡಿ, ಅನಿತಾ ಮಹಾಜನ, ಭರತ ಬೂಶನ, ಸುಭಾಷ ಡಂಕ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net