ಭುವನಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ 11.83 ಲಕ್ಷ ರೂ. ನಿವ್ವಳ ಲಾಭ

05BTP01
Published on

ಬೆಟ್ಟದಪುರ: ಭುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 11,83,038 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಕಾರ್ಯದರ್ಶಿ ಬಿ.ಆರ್. ಪ್ರಕಾಶ್ ಹೇಳಿದರು.


ಬೆಟ್ಟದಪುರ ಸಮೀಪದ ಭುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಗುರುವಾರ ಆಯೋಜಿಸಿದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಹೆಚ್ಚು ಲಾಭವನ್ನು ಪಡೆಯಬಹುದಾಗಿದೆ. ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರ ಸಹಕಾರ ಮುಖ್ಯವಾಗಿದೆ ಎಂದರು.


ಸಂಘದ ಅಧ್ಯಕ್ಷ ಬಿ.ಎಸ್ ವೆಂಕಟೇಶ್, ಉಪಾಧ್ಯಕ್ಷೆ ಕುಸುಮಾ, ನಿರ್ದೇಶಕರಾದ ಪಾಪಶೆಟ್ಟಿ, ಬಿ.ಎನ್. ಮಂಜುನಾಥ್, ಕೃಷ್ಣಮೂರ್ತಿ, ಬಿ.ಎಸ್. ರವಿ, ನಾಗೇಶ, ಕನ್ಯಾಕುಮಾರಿ, ಚನ್ನಯ್ಯ, ಗೋವಿಂದಶೆಟ್ಟಿ, ಬಿ.ಆರ್. ದೇವರಾಜ, ಬಿ.ಎಸ್. ಜಯಣ್ಣ, ಸಿಬ್ಬಂದಿ ಜಲೇಂದ್ರ, ಬಿ.ಆರ್. ರಂಗಸ್ವಾಮಿ, ಗ್ರಾಮದ ಮುಖಂಡರು, ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net