ಪಾರ್ಟ್‌ಟೈಮ್ ಜಾಬ್‌ಗೆ 11.82 ಲಕ್ಷ ರೂ. ಪಂಗನಾಮ

cen police station
ಶಿವಮೊಗ್ಗ ಸಿಇಎನ್ ಠಾಣೆ
Published on

ಶಿವಮೊಗ್ಗ: ಪಾರ್ಟ್‌ಟೈಮ್ ಉದ್ಯೋಗ ಕೊಡುವ ನೆಪದಲ್ಲಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ 11.82 ಲಕ್ಷ ರೂ. ವಂಚನೆ ಮಾಡಲಾಗಿದೆ.

ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗ ಕೊಡುವುದಾಗಿ ಏ.3ರಂದು ಮಹಿಳೆಗೆ ಟೆಲಿಗ್ರಾಂನಲ್ಲಿ ಮೆಸೇಜ್ ಬಂದಿತ್ತು. ಹೊಟೇಲ್ ಒಂದರ ವೆಬ್‌ಸೈಟ್ ಲಿಂಕ್ ಕಳುಹಿಸಿ ಪ್ರಮೋಟ್ ಮಾಡುವಂತೆ ಸೂಚಿಸಲಾಯಿತು. ಇದಕ್ಕೆ 700 ರೂ. ಅನ್ನು ಮಹಿಳೆಯ ಖಾತೆಗೆ ವರ್ಗಾಯಿಸಲಾಗಿತ್ತು.
ಟಾಸ್ಕ್‌ಗಳನ್ನು ಪೂರೈಸಿ ಹೆಚ್ಚು ಹಣ ಸಾಂಪಾದಿಸಬಹುದು. ಟಾಸ್ಕ್‌ಗಳಿಗೆ ಹಣ ಪಾವತಿಸಬೇಕೆಂದು ಸೂಚಿಸಲಾಗಿತ್ತು. ಅದರಂತೆ ಶಿವಮೊಗ್ಗದ ಮಹಿಳೆ ವಿವಿಧ ಹಂತದಲ್ಲಿ 11.82 ಲಕ್ಷ ರೂ. ಅನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ್ದರು. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಸ್ನೇಹಿತರು, ಪರಿಚಿತರಿಗೆ ವಿಷಯ ತಿಳಿಸಿದ್ದರು. ವಂಚನೆಗೊಳಗಾದ ಅರಿವಾಗುತ್ತಿದ್ದಂತೆ ಮಹಿಳೆ ದೂರು ನೀಡಿದ್ದಾರೆ. ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net