

ಶಿವಮೊಗ್ಗ: ಟೆಲಿಗ್ರಾಂ ಆ್ಯಪ್‌ನಲ್ಲಿ ಹೋಟೆಲ್ ಬಗ್ಗೆ ರಿವ್ಯ ಬರೆದು ಹಣ ಸಂಪಾದಿಸಬಹುದೆಂದು ಟ್ರಾವೆಲ್ ಪಾರ್ಟ್‌ನರ್ ಎಂಬ ಹೆಸರಿನಲ್ಲಿ ನಂಬಿಸಿ ಯುವಕನಿಗೆ ಬರೋಬ್ಬರಿ 11.79 ಲಕ್ಷ ರೂ. ವಂಚಿಸಲಾಗಿದೆ.
ಶಿವಮೊಗ್ಗದ ಯುವಕ ವಂಚನೆಗೆ ಒಳಗಾಗಿದ್ದು ಟೆಲಿಗ್ರಾಂ ಆ್ಯಪ್‌ನಲ್ಲಿ ರಿವ್ಯ ಬರೆದು ಹಣ ಸಂಪಾದಿಸುವ ಕುರಿತು ಲಿಂಕ್ ಬಂದಿತ್ತು. ಅದನ್ನು ನಂಬಿ ರಿವ್ಯ ಬರೆದ ಆತನ ಬ್ಯಾಂಕ್ ಖಾತೆಗೆ 720 ರೂ. ನಗದು ಬಂದಿತ್ತು. ಆನಂತರ 10 ಸಾವಿರ ರೂ. ಡೆಪಾಸಿಟ್ ಮಾಡಿ ಹೊಟೇಲ್ ರಿವ್ಯ ಬರೆದರೆ 7,230 ರೂ. ಕಮಿಷನ್ ದೊರೆಯಲಿದೆ ಎಂಬ ಟಾಸ್ಕ್ ನೀಡಿದ್ದು ರಿವ್ಯ ಬರೆಯುತ್ತಿದ್ದಂತೆ ಯುವಕನ ಖಾತೆಗೆ ಡೆಪಾಸಿಟ್ ಮೊತ್ತ 10 ಸಾವಿರ ಹಾಗೂ ಕಮಿಷನ್ ಮೊತ್ತ 7,230 ರೂ. ಸೇರಿ 17,230 ರೂ. ಬಂದಿತ್ತು.
ನಂತರ ಯುವಕನಿಂದ ಆಗಸ್ಟ್ 9ರಿಂದ 20ರವರೆಗೆ ವಿವಿಧ ಹಂತದಲ್ಲಿ 11.29 ಲಕ್ಷ ರೂ. ಹಣ ಹಾಕಿಸಿಕೊಂಡು, ವಿವಿಧ ಟಾಸ್ಕ್ ನೀಡಿ ಲಾಭಾಂಶ ನೀಡದೆ ವಂಚಿಸಲಾಗಿದೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.