ಪ್ರಾಧ್ಯಾಪಕಗೆ 11.52 ಲಕ್ಷ ರೂ. ವಂಚನೆ

cybe crime
Published on

ಹುಬ್ಬಳ್ಳಿ: ನಗರದ ಪ್ರಾಧ್ಯಾಪಕರೊಬ್ಬರಿಗೆ ಲಾಭದ ಆಸೆ ತೋರಿಸಿದ ವಂಚಕರು, ಅವರಿಂದ 11.52 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ನಗರದ ರವಿಕುಮಾರ ವಂಚನೆಗೆ ಒಳಗಾದವರು. ಪೋರ್ಟ್​ಪೈಲ್ ಟ್ರೇಡ್ ಹೆಸರಿನಲ್ಲಿ ವಂಚಕರು, ರವಿಕುಮಾರ ಅವರನ್ನು ನಂಬಿಸಿ ಅಕೌಂಟ್ ಕ್ರಿಯೇಟ್ ಮಾಡಿಸಿ ಲಾಭದ ಆಸೆ ತೋರಿಸಿದ್ದಾರೆ. ನಂತರ 11.52 ಲಕ್ಷ ರೂಪಾಯಿ ಹಂತ ಹಂತವಾಗಿ ಹಾಕಿಸಿಕೊಂಡು ನಂತರ ಅದನ್ನು ಯುಎಸ್​ಡಿ ಮತ್ತು ಬಿಟ್​ಕಾಯಿನ್ ಆಗಿ ಕನ್ವರ್ಟ್ ಮಾಡಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆ: ನಗರದ ಶುಶ್ರೂಷಕಿಯ ಎಫ್​ಡಿ ಖಾತೆಯಿಂದ 5 ಲಕ್ಷ ರೂ. ಲೋನ್ ತೆಗೆಸಿಕೊಂಡು ಅಪರಿಚಿತರು ವಂಚಿಸಿದ್ದಾರೆ.

ಬ್ಯಾಂಕಿನವರೊಂದಿಗೆ ಸೇರಿಕೊಂಡ ಅಪರಿಚಿತರು, ಎಫ್​ಡಿ ಖಾತೆಯಿಂದ ಲೋನ್ ತೆಗೆದುಕೊಂಡು ಮೋಸ ಮಾಡಿದ್ದಾರೆ ಎಂದು ಶುಶ್ರೂಷಕಿ ಸಿಇಎನ್ ಕ್ರೖೆಂ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net