ಉಪನ್ಯಾಸಕಗೆ 11.47 ಲಕ್ಷ ರೂ. ವಂಚನೆ

cybe crime
Published on

ಹುಬ್ಬಳ್ಳಿ: ಸ್ಟಾಂಡರ್ಡ್ ಚಾರ್ಟರ್ಡ್ ಹೈ ನೆಟ್‌ವರ್ಕ್ ಅಕೌಂಟ್ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಂಭಾಂಶ ಕೊಡುವುದಾಗಿ ನಂಬಿಸಿದ ವಂಚಕರು, ಧಾರವಾಡದ ಉಪನ್ಯಾಸಕರೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 11.47 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಧಾರವಾಡ ಮಂಜುನಾಥ ಕಾಲನಿಯ ವಿಜಯ ಎನ್. ಎನ್ನುವವರ ಮೊಬೈಲ್ ಫೋನ್‌ನಲ್ಲಿ ವಂಚಕರು ಎಸ್‌ಸಿ ಎಲೈಟ್ ಎನ್ನುವ ಅಪ್ಲಿಕೇಷನ್ ಇನ್‌ಸ್ಟಾಲ್ ಮಾಡಿಸಿದ್ದಾರೆ. ನಂತರ ಬ್ಯಾಂಕ್ ಖಾತೆಯಿಂದ 98 ಸಾವಿರ ರೂ. ಹಣ ಪಡೆದು 10 ಸಾವಿರ ರೂ. ಲಾಭಾಂಶ ಕೊಟ್ಟಿದ್ದಾರೆ. ಆ ಮೇಲೆ ವಿವಿಧ ಬ್ಯಾಂಕ್ ಖಾತೆಗಳಿಂದ 11.47 ಲಕ್ಷ ರೂ. ವರ್ಗಾಯಿಸಿಕೊಂಡ ಆರಾಧ್ಯ ಮಿಶ್ರಾ ಸೇರಿ ಇತರರು, ಲಾಭಾಂಶ ಸಹಿತ ಕೊಟ್ಟ ವಾಪಸ್ ನೀಡಿಲ್ಲ ಎಂದು ವಿಜಯ, ಸಿಇಎನ್ ಕ್ರೈಂಗೆ ಕೊಟ್ಟ ದೂರಿನಲ್ಲಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net