ಆ್ಯಪ್ ಬಳಸಿ ನಿವೃತ್ತ ನೌಕರನಿಗೆ 11.24 ಲಕ್ಷ ರೂ. ವಂಚನೆ

cen police station
ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆ
Published on

ಶಿವಮೊಗ್ಗ: ಆನ್‌ಲೈನ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ವಂಚಕರು ನಾನಾ ಮಾರ್ಗಗಳಲ್ಲಿ ಬ್ಯಾಂಕ್ ಖಾತೆಯಿಂದ ಹಣ ಗುಳುಂ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಒಟಿಪಿ ಇಲ್ಲದೆಯೇ ಮಹಿಳೆಯೊಬ್ಬ ಖಾತೆಯಿಂದ ಲಕ್ಷಾಂತರ ರೂ. ವರ್ಗಾವಣೆ ಮಾಡಿಕೊಳ್ಳಲಾಗಿತ್ತು. ಇದೀಗ ಶಿವಮೊಗ್ಗದ ನಿವೃತ್ತ ನೌಕರರೊಬ್ಬರಿಗೆ ಆ್ಯಪ್ ಬಳಸಿ ಬರೋಬ್ಬರಿ 11.24 ಲಕ್ಷ ರೂ. ವಂಚಿಸಿದ್ದಾರೆ.

ನಿವೃತ್ತ ನೌಕರನ ಮೊಬೈಲ್‌ಗೆ ಕೆನರಾ ಬ್ಯಾಂಕ್‌ನಿಂದ 12 ಮೆಸೇಜ್ ಬಂದಿತ್ತು. ಹಂತ ಹಂತವಾಗಿ ಅವರ ಖಾತೆಯಿಂದ ಲಕ್ಷಾಂತರ ರೂ. ಕಡಿತವಾಗಿರುವ ಮಾಹಿತಿ ಎಸ್‌ಎಂಎಸ್‌ನಲ್ಲಿತ್ತು. ಕೂಡಲೆ ಬ್ಯಾಂಕ್‌ಗೆ ತೆರಳಿ ವಿಚಾರಣೆ ಮಾಡಿದಾಗ ನಿವೃತ್ತ ನೌಕರನ ಬ್ಯಾಂಕ್ ಖಾತೆಯಿಂದ ಬೇರಾವುದೇ ಖಾತೆಗೂ ಹಣ ವರ್ಗಾವಣೆ ಆಗಿರಲಿಲ್ಲ ಎನ್ನುವುದು ಬೆಳಕಿಗೆ ಬಂದಿತ್ತು.
ಆ್ಯಪ್ ಬಳಸಿ ಹಣ ವರ್ಗಾಯಿಸಿಕೊಂಡಿರುವುದು ಗೊತ್ತಾಗಿದೆ. ಈ ಸಂಬಂಧ ನಿವೃತ್ತ ನೌಕರ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net