10ರಂದು ಶೋಭಾಯಾತ್ರೆ

nrp dattamala
ಎನ್.ಆರ್.ಪುರ ಮಂಡಗದ್ದೆ ಸರ್ಕಲ್ ಬಳಿಯ ಈಶ್ವರ ದೇವಸ್ಥಾನದಲ್ಲಿ ದತ್ತಮಾಲೆ ಧಾರಣೆ ಮಾಡಲಾಯಿತು. ಬಜರಂಗದಳ ನಗರ ಸಂಯೋಜಕ ದರ್ಶನ್ ಇತರರಿದ್ದರು.
Published on

ಎನ್.ಆರ್.ಪುರ: ದತ್ತ ಜಯಂತಿ ಅಂಗವಾಗಿ ಬಜರಂಗದಳ ಕಾರ್ಯಕರ್ತರು ಪಟ್ಟಣದ ಹಳೇ ಮಂಡಗದ್ದೆ ಸರ್ಕಲ್ ಬಳಿ ಶ್ರೀ ಈಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ದತ್ತಮಾಲೆ ಧರಿಸಿದರು.

ಬಜರಂಗದಳ ನಗರ ಸಂಯೋಜಕ ದರ್ಶನ್ ಬಜರಂಗದಳ ಕಾರ್ಯಕರ್ತರೊಂದಿಗೆ ದತ್ತಮಾಲೆ ಧರಿಸುವುದರ ಮೂಲಕ ದತ್ತಮಾಲೆಗೆ ಚಾಲನೆ ನೀಡಿ ಮಾತನಾಡಿ, ಡಿ.10 ರಂದು ಬೆಳಗ್ಗೆ 11 ಗಂಟೆಗೆ ಬಸ್ತಿಮಠದ ಮಹಾವೀರ ಭವನದಲ್ಲಿ ಸತ್ಯನಾರಾಯಣ ಪೂಜೆ ನೆರವೇರಲಿದೆ. ಮಧ್ಯಾಹ್ನ 3 ಗಂಟೆಗೆ ಬಸ್ತಿಮಠದ ಆವರಣದಿಂದ ಶೋಭಾಯಾತ್ರೆ ಹೊರಟು ಪ್ರವಾಸಿ ಮಂದಿರದ ಸರ್ಕಲ್ ತಲುಪಿ ಅಲ್ಲಿಂದ ಮೇದರ ಬೀದಿ ಮಾರ್ಗವಾಗಿ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣ ತಲುಪಲಿದೆ. ನಂತರ ಬೃಹತ್ ವೇದಿಕೆಯಲ್ಲಿ ಹಿಂದು ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ದಿಕ್ಸೂಚಿ ಭಾಷಣಕಾರರಾಗಿ ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net