10ರಂದು ಬಸವ ಜಯಂತಿ ಕಾರ‌್ಯಕ್ರಮ

basavannaa
Published on

ಚಿತ್ರದುರ್ಗ:ನಗರದ ಬಸವ ಮಂಟಪದಲ್ಲಿ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನವರ 891ನೇ ಜಯಂತಿ ಅಂಗವಾಗಿ ಮೇ10ರಂದು ವಿ ವಿಧ ರೀತಿಯ ಕಾರ‌್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 9 ಗಂಟೆಗೆ ಮೆರವಣಿಗೆ,ಗುರುಬಸವಪೂಜೆ,ಧ್ವಜಾರೋಹಣ,ತೊಟ್ಟಿಲು ಕಾರ್ಯಕ್ರಮ,11ಗಂಟೆಗೆ ಉಳವಿ ಅಕ್ಕ ನಾಗಲಾಂಬಿಕ ಯೋಗ ಪೀಠದ ಪೀಠಾಧ್ಯಕ್ಷೆ ಶ್ರೀ ಜಗದ್ಗುರು ಮಾತೆ ದಾನೇಶ್ವರಿ ಮಾತಾಜಿ ಸಾನ್ನಿಧ್ಯದಲ್ಲಿ ವಚನ ಚಿಂತನೆ ಕಾರ‌್ಯಕ್ರಮ ನಡೆಯಲಿದೆ. ಸಾಸಲಹಟ್ಟಿ ಅಕ್ಕಮಹಾದೇವಿ ಮಠದ ಶ್ರೀ ಬಸವೇಶ್ವರಿ ಮಾತಾಜಿ ಸಮ್ಮುಖ ವಹಿಸಲಿದ್ದಾರೆ. ಶಿರಸಿ ಅರಣ್ಯ ಮಹಾ ವಿದ್ಯಾಲಯದ ಡೀನ್ ಡಾ.ಎಚ್. ಶಿವಣ್ಣ ಕಾರ‌್ಯಕ್ರಮ ಉದ್ಘಾಟಿಸಲಿದ್ದಾರೆ. ವೈದ್ಯಾಧಿಕಾರಿ ಡಾ.ಇಂದುಧರ್ ಧ್ವಜಾರೋಹಣ ನೆರವೇರಿಸಲಿದ್ದಾರೆ.
ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಜೆ.ಸಿ.ಮನೋಹರ್,ಡಾ.ಸತೀಶ್‌ಕುಮಾರ್,ಪತ್ರಕರ್ತ ಎಸ್.ಟಿ.ನವೀನ್‌ಕುಮಾರ್,ನಿವೃತ್ತ ಶಿಕ್ಷಕ ಈರಪ್ಪ, ಸವಿತಾ ಸಮಾಜದ ಚಿತ್ರದುರ್ಗ ತಾಲೂಕು ಅಧ್ಯಕ್ಷ ಆರ್.ಶ್ರೀನಿವಾಸ್,ರಾಜಣ್ಣ ಭಾಗವಹಿಸಲಿದ್ದಾರೆ.ಬಸವ ಮಂಟಪದ ಮಕ್ಕಳಿಂದ ವಚನ ನೃತ್ಯ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net