

ಚಿತ್ರದುರ್ಗ:ಹಿರಿಯೂರು ತಾಲೂಕು ಬಬ್ಬೂರುಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆ.10ರಂದು ಬೆಳಗ್ಗೆ 10ಕ್ಕೆ ಅಂತಾರಾಷ್ಟ್ರೀ ಯ ಜೈವಿಕ ಇಂಧನ ದಿನಾಚರಣೆ ಅಂಗವಾಗಿ ಜಿಲ್ಲೆ ರೈತರಿಗೆ ಜೈವಿಕ ಇಂಧನ ಹಾಗೂ ಸೌರಶಕ್ತಿ ಕುರಿತು ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಜೆಎಂಐಟಿ ಕಾಲೇಜು ಜೈವಿಕ ಇಂಧನ ಸಂ ಶೋಧನಾ,ಮಾಹಿತಿ ಮತ್ತು ಪ್ರಾತ್ಯಕ್ಷಿಕ ಕೇಂದ್ರದ ಮುಖ್ಯಸಂಯೋಜಕ ಡಾ.ರಾಜೇಶ್,ತಾಂತ್ರಿಕ ಅಧಿಕಾರಿ ಬಿ.ಕೆ.ಸುನೀಲ್‌ಕುಮಾರ್ ಪ ರ್ಯಾಯ ಇಂಧನ ಕುರಿತು ವಿಷಯ ಮಂಡಿಸುವರು. ಆಸಕ್ತ 70 ರೈತರು ಕಾರ‌್ಯಾಗಾರದಲ್ಲಿ ಭಾಗವಹಿಸಲು ದೂರವಾಣಿ ಸಂಖ್ಯೆ 8277931058,9845249832 ಮತ್ತು 95354122 86ನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಆರ್.ಆರ್.ರಜನೀಕಾಂತ ಕೋರಿ ದ್ದಾರೆ. ತರಬೇತಿಗೆ ಹಾಜರಾಗುವಾಗ ಎಫ್‌ಐಡಿ ಅಥವಾ ಚುನಾವಣಾ ಗುರುತಿನ ಚೀಟಿ ಅಗತ್ಯವೆಂದು ಅವರು ತಿಳಿಸಿದ್ದಾರೆ.