10ರಂದು ಇಪಿಎಸ್ ನಿವೃತ್ತ ನೌಕರರ ಸಮಾವೇಶ

53e1a452-46d2-4d0b-9243-c089f8d9b923
Published on

ಮೈಸೂರು: ರಾಜ್ಯ ಇಪಿಎಸ್- 95 ನಿವೃತ್ತ ನೌಕರರ ಒಕ್ಕೂಟದ ವತಿಯಿಂದ ಮೂಲ ವೇತನಕ್ಕೆ ತಕ್ಕಂತೆ ಪಿಂಚಣಿ ನೀಡಬೇಕೆಂಬ ಸುಪ್ರೀಂಕೋರ್ಟ್ ತೀರ್ಪು ಜಾರಿಗೊಳಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ತರಲು ಜ. 10ರಂದು ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಮೈಸೂರು ವಿಭಾಗದ ಸಮಾವೇಶ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಎಸ್.ಪಿ.ನಿಂಗೇಗೌಡ ತಿಳಿಸಿದರು.
ಹಲವಾರು ವರ್ಷಗಳಿಂದ ಪಿಂಚಣಿ ಹೆಚ್ಚಳ ಮತ್ತು ತುಟ್ಟಿ ಭತ್ಯೆ ಸೇರಿದಂತೆ ಕನಿಷ್ಠ ಪಿಂಚಣಿಯನ್ನು 7500 ರೂ. ನೀಡಬೇಕೆಂದು ಹೋರಾಟ ಮಾಡುತ್ತ ಬಂದಿದ್ದರೂ ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಈಗ ದೊರೆಯುತ್ತಿರುವ 450ರಿಂದ 3,000 ರೂ. ಪಿಂಚಣಿ ಹಣದಿಂದ ಜೀವನ ನಡೆಸುವುದು ಸಾಧ್ಯವಿಲ್ಲ. ಈ ಕುರಿತಂತೆ ಸುಪ್ರೀಕೋರ್ಟ್ ತೀರ್ಪು ನೀಡಿದ್ದರೂ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಈ ಸಮಾವೇಶ ಆಯೋಜಿಸಲಾಗಿದೆ. ಇದರಲ್ಲಿ ಒಕ್ಕೂಟದ ಪೋಷಕರು, ಹಿತೈಷಿಗಳು ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಭವಿಷ್ಯ ನಿಧಿ ಸದಸ್ಯರಾದ ಎ.ಕೆ. ಪದ್ಮನಾಭನ್ ಭವಿಷ್ಯ ನಿಧಿ ಕುರಿತಂತೆ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net