10ರಂದು 11 ಪುಸ್ತಕ ಬಿಡುಗಡೆ

lakshmana kounte
Published on

ಕಲಬುರಗಿ: ಕಲ್ಯಾಣ ಕರ್ನಾಟಕದ ಜನಪ್ರಿಯ ಕಾದಂಬರಿಕಾರ ಡಾ.ಲಕ್ಷö್ಮಣ ಕೌಂಟೆ ರಚಿಸಿದ ೧೧ ಕಾದಂಬರಿಗಳು ೧೦ರಂದು ಸಂಜೆ ೬.೩೦ಕ್ಕೆ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿವೆ ಎಂದು ಅಕಾಡೆಮಿ ಕೃಷಿ ವಿಭಾಗದ ಪ್ರಮುಖ ವಿ.ಶಾಂತರೆಡ್ಡಿ ತಿಳಿಸಿದ್ದಾರೆ.
ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಡಾ.ಬಸವರಾಜ ಪಾಟೀಲ್ ಸೇಡಂ ಪುಸ್ತಕ ಲೋಕಾರ್ಪಣೆ ಮಾಡುವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಬಸವರಾಜ ಡೋಣೂರ್, ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ, ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಕಲ್ಯಾಣರಾವ್ ಪಾಟೀಲ್ ಅತಿಥಿಗಳಾಗಿದ್ದು, ಕೃತಿ ಪರಿಚಯ ಮಾಡುವರು.
ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಸಂಸ್ಥಾಪಕ ಬಸವರಾಜ ಕೊನೆಕ್ ಅಧ್ಯP್ಷÀತೆ ವಹಿಸಲಿz್ದÁರೆ. ಕಾದಂಬರಿಕಾರ ಡಾ.ಲಕ್ಷö್ಮಣ ಕೌಂಟೆ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net