10ಕ್ಕೆ ಎನ್ನೆಸ್ಸೆಸ್ಕೆ ಕೃಷಿಂಗ್ ಆರಂಭ

nssk boil
Published on

ಬೀದರ್: ತಾಲೂಕಿನ ಜನವಾಡ ಹತ್ತಿರದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ(ಎನ್ನೆಸ್ಸೆಸ್ಕೆ) ಯಲ್ಲಿ ಮಂಗಳವಾರ ಬಾಯ್ಲರ್ ಪೂಜೆ ನೆರವೇರಿಸಲಾಯಿತು.

ಪೂಜೆ ನೆರವೇರಿಸಿ ಮಾತನಾಡಿದ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ, ಬರುವ 10ರಂದು ಕಾರ್ಖಾನೆಯ 2020-21ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಮಠಾಧೀಶರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರನ್ನು ಆಹ್ವಾನಿಸಲಾಗುತ್ತಿದೆ. ಎಲ್ಲರ ಸಮ್ಮುಖದಲ್ಲಿ ಪೂಜೆ ನೆರವೇರಿಸಿ ಕೃಷಿಂಗ್ ಗೆ ಚಾಲನೆ ನೀಡುವುದಾಗಿ ಹೇಳಿದರು.

ದಿ.ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರು ಕಟ್ಟಿ, ಬೆಳೆಸಿರುವ ಕಾರ್ಖಾನೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾರ್ಗದರ್ಶನದಲ್ಲಿ ಆರ್ಥಿಕ ಪುನಶ್ಚೇತನಗೊಳಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗುವುದು. ಕಾರ್ಖಾನೆ ಚೆನ್ನಾಗಿ ನಡೆಯಬೇಕು, ರೈತರಿಗೆ ಹೆಚ್ಚಿನ ಬೆಲೆ ಕೊಡಬೇಕೆಂಬ ಧ್ಯೇಯ ತಮ್ಮದು ಎಂದರು.

ಕಾರ್ಖಾನೆ ಉಪಾಧ್ಯಕ್ಷ ಬಾಲಾಜಿ ಚವ್ಹಾಣ್, ನಿರ್ದೇಶಕರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಝರೆಪ್ಪಾ ಮಮದಾಪುರೆ, ಚಂದ್ರಕಾಂತ ಪಾಟೀಲ್, ರಾಜಕುಮಾರ ಕರಂಜಿ, ಶಂಕರೆಪ್ಪ ಪಾಟೀಲ್, ಶಿವಬಸಪ್ಪ ಚನ್ನಮಲ್ಲೆ, ಸಿದ್ರಾಮ ವಾಘಮಾರೆ, ವಿಜಯಕುಮಾರ ಸಿತಾಳಗೇರಾ, ಸೀತಾರಾಮ ಖೇಮಾ, ಶೋಭಾವತಿ ಪಾಟೀಲ್, ಮಲ್ಲಮ್ಮಾ ಪಾಟೀಲ್, ಶಶಿಕುಮಾರ ಪಾಟೀಲ್ ಸಂಗಮ್, ವೀರಶೆಟ್ಟಿ ಪಟ್ನೆ, ನಾಗರೆಡ್ಡಿ ಯಾಚೆ, ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಅಪರಂಜಿ, ವಿವಿಧ ವಿಭಾಗ ಮುಖ್ಯಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net