

ಮೈಸೂರು: ಮಾತಾ ಮೆಲೋಡಿಸ್ ಆರ್ಕೆಸ್ಟ್ರಾ ತಂಡದಿಂದ ಡಿ.8ರಂದು ಸಂಜೆ 4.30ಕ್ಕೆ ನಗರದ ಪುರಭವನದಲ್ಲಿ 10ನೇ ವಾರ್ಷಿಕೋತ್ಸವ ಆಯೋಜಿಸಲಾಗಿದೆ ಎಂದು ತಂಡದ ವ್ಯವಸ್ಥಾಪಕ ಎಂ.ಪುಟ್ಟ ಮಹದೇವಪ್ಪ ತಿಳಿಸಿದರು.
ಕಾರ್ಯಕ್ರಮವನ್ನು ನಗರ ಸಶಸ್ತ್ರ ಮೀಸಲು ಪಡೆ ಉಪ ಪೊಲೀಸ್ ಆಯುಕ್ತ ಎ.ಮಾರುತಿ ಉದ್ಘಾಟಿಸಲಿದ್ದಾರೆ. ನೈಜ ಸಂಗೀತ ವಾದ್ಯಗಳ ಸಹಕಾರದೊಂದಿಗೆ ಕನ್ನಡ ಹಾಗೂ ಹಿಂದಿ ಚಲನಚಿತ್ರ ಗೀತೆಗಳನ್ನು ಗಾಯಕರು ಹಾಡಲಿದ್ದಾರೆ. ಕಲಾವಿದರಾದ ರಾಮಸ್ವಾಮಿ, ಗೋಪಾಲ್, ರಾಜು ಮಾಸ್ಟರ್ ಅವರನ್ನು ಈ ವೇಳೆ ಸನ್ಮಾನಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗಾಯಕರಾದ ಪ್ರೇಮಕುಮಾರಿ, ಜಿ.ಪಾರ್ಥಸಾರಥಿ ಇದ್ದರು.