

ಕೊಪ್ಪ: ಹಿರೇಕೊಡಿಗೆಯ ಆಲೆಮನೆ ಶಾಲೆ ಶತಮಾನೋತ್ಸವವನ್ನು ೆ.10ರಂದು ಆದ್ದೂರಿಯಾಗಿ ಆಚರಿಸಲು ನಿರ್ಧಾರಿಸಲಾಗಿದೆ ಎಂದು ಶತಮಾನೋತ್ಸವ ಆಚರಣ ಸಮಿತಿ ಗೌರವಧ್ಯಕ್ಷ ಎಸ್.ಎನ್ ರಾಮಸ್ವಾಮಿ ಹೇಳಿದರು.
ದಾಖಲೆಗಳ ಪ್ರಕಾರ ಶಾಲೆ 1905ರಂದು ಆರಂಭವಾಯಿತು. 15 ವರ್ಷ ಮಿಷನ್ ಸ್ಕೂಲ್ ಆಗಿ ನಡೆಯಿತು. ನಂತರದಲ್ಲಿ ಸರ್ಕಾರದಿಂದ ಆಧಿಕೃತವಾಗಿ ರಚನೆಗೊಂಡಿತು. ಕೊಪ್ಪ, ತಿರ್ಥಹಳ್ಳಿ ಗಡಿ ಭಾಗದಲ್ಲಿ ಶಾಲೆಯಿದ್ದ ಕಾರಣ ಸಾವಿರರು ಮಕ್ಕಳು ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ. ನಮಗೂ ಸಹ ಶಾಲೆಯ ಸರಿಯಾದ ದಾಖಲೆಗಳು ಸಿಗದ ಕಾರಣ 20 ವರ್ಷಗಳ ನಂತರ ಶತಮಾನೋತ್ಸವ ಆಚರಿಸಲಾಗುತ್ತಿದೆ. ಎ.ಆರ್.ಗುರು ಅವರ ಪ್ರಕಟಿತ ಹೊರಬೈಲು ಮನೆತನದ ಆಯ್ದ ದಾಖಲೆಗಳು ಎಂಬ ಪುಸ್ತಕದಲ್ಲಿ ಶಾಲೆ ಬಗ್ಗೆ ದಾಖಲೆಗಳು ಸಿಕ್ಕಿವೆ ಎಂದರು.
ವಿಶೇಷ ಎಂದರೆ ಶಾಲೆಯನ್ನು ಆಗಿನ ಕಾಲದಲ್ಲಿ ಊರಿನ ಹಿರಿಯರು ದೇಣಿಗೆಯಿಂದ ಶಾಲೆ ನಿರ್ಮಾಣ ಮಾಡಿದ್ದರು. ಇದಕ್ಕೆ ಹಿರೇಕೊಡಿಗೆ, ಗುಣವಂತೆ, ಬೆಕ್ಕನೂರು ಗ್ರಾಮದ ಗ್ರಾಮಸ್ಥರ ಸಹಕಾರ ಹೆಚ್ಚಾಗಿದೆ. ಶಾಲೆ ಹಂತ, ಹಂತವಾಗಿ ಅಭಿವೃದ್ಧಿಗೊಂಡಿದೆ. ಈಗ ಎಲ್‌ಕೆಜಿ, ಯುಕೆಜಿ ತರಗತಿಗಳು ಸಹ ಆರಂಭಗೊಂಡಿದೆ ಎಂದರು.
ಎಚ್.ಎಂ.ರವಿಕಾಂತ್ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಅಂದಿನ ಕಾಲದಲ್ಲಿ ಕಾಲ್ವಡಿ ಕಷ್ಣರಾಜ ಒಡೆಯರ ಕೊಡುಗೆ ಅಪಾರವಾಗಿತ್ತು. ಅವರ ಕಾಲದಲ್ಲಿ 6000 ಶಾಲೆಗಳು ಆರಂಭವಾಯಿತು. ಅದರಲ್ಲಿ ಆಲೆಮನೆ ಶಾಲೆಯೂ ಒಂದು. ಆಲೆಮನೆಯ ಸಣ್ಣ ಸಿದ್ದಪ್ಪ ನಾಯಕ್ ರವರ ನೇತೃತ್ವದಲ್ಲಿ ಶಾಲೆ ಆರಂಭಗೊಂಡಿತು. ನಂತರದ ಹಿರಿಯರ ತ್ಯಾಗದ ಕಾರಣ ಶಾಲೆ ಉಳಿವಿಗೆ ಕಾರಣವಾಗಿದೆ. ಈಗ ನಾವು ಶತಮನೋತ್ಸವದ ಹೆಸರಿನಲ್ಲಿ ಶಾಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಶಾಲೆ ದಾಖಲಾತಿಗಳನ್ನು ಹೆಚ್ಚಿಸಿ ಶಾಲೆ ಉಳಿವಿಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.