

ಬೀದರ್: ತಾಲ್ಲೂಕಿನ ಆಣದೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ನಡೆದ 108 ಅಡಿ ಉದ್ದದ ರಾಷ್ಟ್ರ ಧ್ವಜದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು.
ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪುನಃ ವೃತ್ತಕ್ಕೆ ಬಂದು ಸಮಾರೋಪಗೊಂಡಿತು. ವಿದ್ಯಾರ್ಥಿಗಳು, ಸಾರ್ವಜನಿಕರು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದುಕೊಂಡಿದ್ದರು. ಮೆರವಣಿಗೆ ಉದ್ದಕ್ಕೂ ಭಾರತ ಮಾತೆಗೆ ಜೈಕಾರದ ಘೋಷಣೆಗಳು ಮೊಳಗಿದವು.
ಜನವಾಡ ಪೊಲೀಸ್ ಠಾಣೆ ಪಿಎಸ್‍ಐ ಶಿವರಾಜ ಪಾಟೀಲ ಭಾರತ ಮಾತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಉಪಾಧ್ಯಕ್ಷೆ ಕಲಾವತಿ ಲಕ್ಷ್ಮಣ, ಪಿಡಿಒ ಮಲ್ಲಿಕಾರ್ಜುನ ಡೋಣೆ, ಸದಸ್ಯರಾದ ಶಾಂತಕುಮಾರ ಬಶೆಟ್ಟಿ, ಮೀನಾಕ್ಷಿ ಗುಮ್ತಾಪುರ, ಜಗದೇವಿ ಉಪ್ಪಾರ, ಜ್ಯೋತಿ ರಾಜಕುಮಾರ, ವಿಶಾಲ್ ಸೋನೆ, ತಿಪ್ಪಣ್ಣ ಉಪ್ಪಾರ, ಜೈಭೀಮ ಸೋಲಾಪುರ, ಬಸವಕುಮಾರ ಪಾಟೋದಿ, ಸಂತೋಷ ರೆಡ್ಡಿ ತಿಪ್ಪಾರೆಡ್ಡಿ, ಪ್ರಭು ಪಸರ್ಗಿ, ರತನಸಿಂಗ್, ಜನಾರ್ದನ್ ರೆಡ್ಡಿ, ಜಗನ್ನಾಥ ಹಡಪದ, ಮಹೇಶ ತಳಘಟ, ರಾಜಕುಮಾರ ಪೋಳ, ಶಿವಶಂಕರ ವಡ್ಡಿ, ಮಹಿಪಾಲರೆಡ್ಡಿ ಭೀಮರೆಡ್ಡಿ, ಭೀಮಣ್ಣ ಸೋರಳ್ಳಿ ಪಾಲ್ಗೊಂಡಿದ್ದರು.