ಹೊನ್ನಮ್ಮ ಕೆರೆ ದಡದಲ್ಲಿ 108 ಸೂರ್ಯ ನಮಸ್ಕಾರ

ಹೊನ್ನಮ್ಮ ಕೆರೆ ದಡದಲ್ಲಿ 108 ಸೂರ್ಯ ನಮಸ್ಕಾರ
Published on

ಸೋಮವಾರಪೇಟೆ: ಆರ್ಟ್ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ ಪಟ್ಟಣ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿರುವ ಶ್ರೀ ಹೊನ್ನಮ್ಮ ಕೆರೆ ದಡದಲ್ಲಿ ಶುಕ್ರವಾರ ರಥಸಪ್ತಮಿ ಅಂಗವಾಗಿ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂಸ್ಥೆಯ ಶಿಕ್ಷಕಿ ರಾಗಿಣಿ ನೇತೃತ್ವದಲ್ಲಿ ಸಾರ್ವಜನಿಕರು 108 ಸೂರ್ಯ ನಮಸ್ಕಾರ ಮಾಡಿದರು. ನಂತರ ಶ್ರೀ ಕ್ಷೇತ್ರ ಹೊನ್ನಮ್ಮನ ದೇವಾಲಯದಲ್ಲಿ ಲಲಿತ ಸಹಸ್ರನಾಮ ನಡೆಯಿತು.

‘ಯೋಗ ಮತ್ತು ಧ್ಯಾನದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಪ್ರತಿಯೊಬ್ಬರೂ ನಿರಂತರವಾಗಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಶಿಕ್ಷಕಿ ರಾಗಿಣಿ ಕಿವಿಮಾತು ಹೇಳಿದರು.

ಆರ್ಟ್ ಆಫ್ ಲಿವಿಂಗ್‌ನ ಮೃತ್ಯುಂಜಯ, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಡಾ. ಸುಪರ್ಣ ಕೃಷ್ಣಾನಂದ್, ಪ್ರಮುಖರಾದ ಕೊಮಾರಪ್ಪ, ಗೌಡಳ್ಳಿ ಗ್ರಾಪಂ ಅಧ್ಯಕ್ಷ ಅಜ್ಜಳ್ಳಿ ನವೀನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net