

ಮದ್ದೂರು : ಪಟ್ಟಣದ ಲೀಲಾವತಿ ಬಡಾವಣೆಯ 5ನೇ ಕ್ರಾಸ್‌ನಲ್ಲಿ ಎಂ-ಒನ್ ಗ್ರೂಪ್ ವತಿಯಿಂದ 108 ರೀತಿಯ ವಿಭಿನ್ನ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಗಮನ ಸೆಳೆದಿದ್ದಾರೆ.
ಸುಮಾರು 12 ವರ್ಷಗಳಿಂದ ನಿರಂತರವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದು, ಈ ಬಾರಿ ಗಣೇಶನ ಮೂರ್ತಿಗಳನ್ನು ವಿಶೇಷವಾಗಿ ಪ್ರತಿಷ್ಠಾಪಿಸಬೇಕು ಎಂಬ ಉದ್ದೇಶದಿಂದ ಮತ್ತು ಲೋಕ ಕಲ್ಯಾಣಕ್ಕಾಗಿ ಹಾಗೂ ಸಕಲ ಜೀವರಾಶಿಗಳಿಗೂ ಒಳಿತಾಗಲಿ ಎಂಬ ಉದ್ದೇಶದಿಂದ ಬೆಂಗಳೂರಿನಿಂದ 108 ಗಣೇಶನ ಮೂರ್ತಿ ಪ್ರತಿಷ್ಠಾಪಿಸಿರುವುದು ಭಕ್ತರ ಹಾಗೂ ಸಾರ್ವಜನಿಕರ ಗಮನ ಸೆಳೆದಿದೆ.
ಗಣೇಶನ ಪ್ರತಿಷ್ಠಾಪನಾ ಅಂಗವಾಗಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ, ವಿವಿಧ ರೀತಿಯ ಗ್ರಾಮೀಣ ಕ್ರೀಡಾಕೂಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ರೀತಿಯ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೆ.17 ಕ್ಕೆ ಗಣೇಶನ ಮೂರ್ತಿಗಳನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ ಉಪ್ಪಿನಕೆರೆ ಗ್ರಾಮದ ಉಪ್ಪಿನಕೆರೆಯಲ್ಲಿ ಪ್ರತಿಷ್ಠಾಪನೆ ಮಾಡಲು ಎಂ-ಒನ್ ಗ್ರೂಪ್ ಪದಾಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಗಣೇಶನ ಪ್ರತಿಷ್ಠಾಪನೆ ಅಂಗವಾಗಿ ಈಗಾಗಲೇ ಹೋಮ ಹವನ, ಪ್ರತಿನಿತ್ಯ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಗುತ್ತಿದೆ.
ಎಂ-ಒನ್ ಗ್ರೂಪ್‌ನ ವರುಣ್, ಮೋಹಿತ್, ಅಪ್ಪಿ, ಮುನ್ನ, ಸಾಗರ್, ಸುಮಂತ್, ದಿಕ್ಷೀತ್, ಮಹೇಶ್, ಪವನ್, ಕಿಸನ್, ಚರಣ್, ಕುಮಾರ್, ಯಶವಂತ್, ಅಕುಲ್, ಪುನೀತ್ ಸೇರಿದಂತೆ ಇತರರು ಗಣೇಶನ ಪ್ರತಿಷ್ಠಾಪನೆಯಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ.
ಗಣೇಶನ ಮೂರ್ತಿಗಳನ್ನು ನೋಡಲು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಣೆ ಮಾಡುತ್ತಿರುವುದು ಸಾಮಾನ್ಯವಾಗಿದೆ.
ಪಟ್ಟಣದ ಲೀಲಾವತಿ ಬಡಾವಣೆಯ 5ನೇ ಕ್ರಾಸ್‌ನಲ್ಲಿ ಎಂ-ಒನ್ ಗ್ರೂಪ್ ಪದಾಧಿಕಾರಿಗಳು ತುಂಬಾ ಇಷ್ಟಪಟ್ಟು 108 ವಿಭಿನ್ನ ರೀತಿಯ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವುದು ನೋಡುಗರ ಹಾಗೂ ಭಕ್ತಾಧಿಗಳ ಗಮನ ಸೆಳೆದಿದೆ. ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು ಹಾಗೂ ವಿಸರ್ಜನೆ ಮಾಡುವುದು ್ನ ಪ್ರತಿಷ್ಠಾಪಿಸಿರುವುದು ವಿಶೇಷವಾಗಿದೆ.
ಕೆ.ಆರ್.ಕುಮಾರ್
ಸುಮುಖ ನಿಧಿ ಲಿಮಿಡೆಟ್ ಅಧ್ಯಕ್ಷ ಕುಂದನಕುಪ್ಪೆ