

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮೈಸೂರು ಜಿಲ್ಲೆಯಲ್ಲಿ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ 2, ಅಬಕಾರಿ ಇಲಾಖೆಯಿಂದ 110 ಸೇರಿದಂತೆ 112 ಎಫ್‌ಐಆರ್ ದಾಖಲಿಸಲಾಗಿದೆ.
3.18 ಕೋಟಿ ರೂ.ನಗದು ವಶ ಪಡಿಸಿಕೊಂಡಿದ್ದು, 2.13 ಕೋಟಿ ರೂ. ವಾಪಸ್ ನೀಡಿ, 1.05 ಕೋಟಿ ರೂ. ಆದಾಯ ತೆರಿಗೆ ಇಲಾಖೆ ವಶಕ್ಕೆ ನೀಡಲಾಗಿದೆ. 108.81 ಕೋಟಿ ರೂ. ಮೊತ್ತದ 1.25 ಲಕ್ಷ ಲೀಟರ್ ಅಕ್ರಮ ಮದ್ಯ, 1.27 ಲಕ್ಷ ಮೊತ್ತದ 4.894 ಕೆಜಿ ಡ್ರಗ್ಸ್, ನಾರ್ಕೋಟಿಕ್ಸ್, 46.69 ಗ್ರಾಂ ಚಿನ್ನ, 1728 ಸೀರೆ, ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಅಬಕಾರಿ ಕಾಯ್ದೆಯಡಿ 33 ಎಫ್‌ಐಆರ್ ದಾಖಲಾಗಿದ್ದು, 18.01 ಲಕ್ಷ ರೂ. ನಗದು, 1.27 ಕೋಟಿ ರೂ. ಬೆಲೆಯ 42,323 ಲೀಟರ್ ಅಕ್ರಮ ಮದ್ಯ, 1.01 ಲಕ್ಷ ರೂ. ಬೆಲೆಯ 4.41 ಕೆಜಿ ಡ್ರಗ್ಸ್ ಅನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.