108 ಆ್ಯಂಬುಲೆನ್ಸ್​ 3 ಶಿಫ್ಟ್​ ಸೇವೆಯಿಂದ ರೋಗಿಗಳಿಗೆ ಸಂಕಷ್ಟ

udp-10-ambulance
Published on

ಉಡುಪಿ: ಆರೋಗ್ಯ ಕವಚ 108 ಆ್ಯಂಬುಲೆನ್ಸ್​ ಸೇವಾ ನಿಯಮಗಳಲ್ಲಿ ದಢೀರ್​ ಬದಲಾವಣೆಯಾಗಿದ್ದು, ಸಿಬ್ಬಂದಿ 3 ಪಾಳಿಯಲ್ಲಿ ಕಾರ್ಯನಿರ್ವಹಿಸುವಂತೆ ರಾಜ್ಯ ಸರ್ಕಾರದ ನೀಡಿದ ಆದೇಶದಿಂದ ಸಮರ್ಪಕ ಆ್ಯಂಬುಲೆನ್ಸ್​ ಸೇವೆ ಸಿಗದೆ ರೋಗಿಗಳು ಪರದಾಡುವಂತಾಗಿದೆ. ಈ ಹಿಂದೆ ತಲಾ 12 ಗಂಟೆಯಂತೆ 2 ಪಾಳಿಯಲ್ಲಿ ಆಂಬುಲೆನ್ಸ್​ ಕಾರ್ಯ ನಿರ್ವಹಿಸುತ್ತಿತ್ತು. ಕಳೆದ ಜನವರಿಯಿಂದ 3 ಶಿಪ್ಟ್​ಗಳಿಗೆ ಬದಲಾಯಿಸಲಾಗಿದೆ. ಆದರೆ 3 ಪಾಳಿಗೆ ಅಗತ್ಯವಿರುವ ಹೆಚ್ಚುವರಿ ಚಾಲಕರನ್ನು ನೇಮಕ ಮಾಡಿಕೊಳ್ಳದೆ ಏಕಾಏಕೀ ರ್ನಿಣಯಕೈಗೊಂಡಿರುವುದರಿಂದ ಚಾಲಕರಿಲ್ಲದೆ ಆಂಬುಲೆನ್ಸ್​ ಸೇವೆ ಸಿಗುತ್ತಿಲ್ಲ. 3 ಪಾಳಿಗಳಲ್ಲಿ ಯಾರಾದರೂ ಚಾಲಕ ರಜೆಯಲ್ಲಿದ್ದರೆ ಪರ್ಯಾಯ ಚಾಲಕನ ವ್ಯವಸ್ಥೆ ಕೂಡಾ ಇಲ್ಲದಿರುವುದರಿಂದ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಆಂಬುಲೆನ್ಸ್​ ಸಿಗದೆ ಸಮಸ್ಯೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ತುರ್ತು ಗಮನಹರಿಸಬೇಕು ಎಂಬುದಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ. 18 ಆ್ಯಂಬುಲೆನ್ಸ್​ 55 ಮಂದಿ ಸಿಬ್ಬಂದಿ ಜಿಲ್ಲೆಯಲ್ಲಿ 18 ಆರೋಗ್ಯ ಕವಚ ಆ್ಯಂಬುಲೆನ್ಸ್​ಗಳು ಕಾರ್ಯನಿರ್ವಹಿಸುತ್ತಿದ್ದು, 36 ಮಂದಿ ಚಾಲಕರು ಹಾಗೂ 16 ಮಂದಿ ಸ್ಟ್​ಾನರ್ಸ್​ಗಳಿದ್ದಾರೆ. ಈಗಾಗಲೇ ಸುಮಾರು 18 ಸ್ಟ್​ ನರ್ಸ್​ ಕೊರತೆ ಕಾಡುತ್ತಿದ್ದು, 3 ಶಿಪ್ಟ್​ ಮಾಡಿದ್ದರಿಂದ ಹೆಚ್ಚುವರಿ ಅವಧಿಗೆ ಹೊಸದಾಗಿ 18 ಮಂದಿ ಚಾಲಕರು ಹಾಗೂ 18 ಮಂದಿ ಸ್ಟ್​ಾ ನರ್ಸ್​ಗಳ ಅಗತ್ಯವಿದೆ. ಉಡುಪಿ ಜಿಲ್ಲಾಸ್ಪತ್ರೆ, ಮಲ್ಪೆ, ಹಿರಿಯಡಕ ಸೇರಿದಂತೆ ವಿವಿಧ ಕಡೆಗಳಲ್ಲಿ 108 ಆಂಬುಲೆನ್ಸ್​ ಸೇವೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ರೋಗಿಗಳ ಜೀವವುಳಿಸುವ ಕೆಲಸ ಮಾಡಿದೆ. ಈ ಹಿಂದೆ 2 ಶಿಫ್ಟ್ಗಳಲ್ಲಿ ಕಾರ್ಯಾಚರಿಸುತ್ತಿರುವಾಗ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಇದೀಗ ಹೊಸ ನಿಯಮದಿಂದ ಸಮಸ್ಯೆ ತಲೆದೋರಿದೆ. ರೋಗಿಗಳಿಗೆ, ಹೆರಿಗೆ ನೋವು ಬಂದ ಮಹಿಳೆಯರಿಗೆ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್​ ಸಿಗುತ್ತಿಲ್ಲ. ಚಾಲಕರು ರಜೆಯಲ್ಲಿದ್ದರೆ ಪರ್ಯಾಯ ವ್ಯವಸ್ಥೆಯನ್ನು ಮಾಡಲೇಬೇಕು. ಯಾವುದೇ ರೋಗಿಗಳಿಗೆ ಆಂಬುಲೆನ್ಸ್​ ಸೇವೆ ಸಿಗದೆ ಅವರ ಜೀವಕ್ಕೆ ಕಂಟಕವಾಗಬಾರದು. -ವಿಶು ಶೆಟ್ಟ ಅಂಬಲಪಾಡಿ, ಸಮಾಜಸೇವಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net