

ಹಾಸನ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 106 ವಿದ್ಯಾರ್ಥಿಗಳಿಗೆ ಮಂಗಳವಾರ ಯೋಜನೆಯ ಜಿಲ್ಲಾ ಕಚೇರಿಯಲ್ಲಿ ಸುಜ್ಞಾನ ವಿಧಿ ಶಿಷ್ಯವೇತನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್ ರಾವ್ ಮಾತನಾಡಿ, ಶಿಷ್ಯವೇತನವನ್ನು ಒಳ್ಳೆಯ ಉದ್ದೇಶಕ್ಕೆ ಬಳಕೆ ಮಾಡಬೇಕು. ದುಂಧು ವೆಚ್ಚ ಮಾಡಬಾರದು. ನಿಮ್ಮಿಂದ ನಾಲ್ಕು ಜನರಿಗೆ ಸಹಾಯ ಆಗಬೇಕು ಎಂದು ಸಲಹೆ ನೀಡಿದರು.
ಜನಜಾಗೃತಿ ವೇದಿಕೆ ಸದಸ್ಯ ಸುರೇಶ್ ಗೂರೂಜಿ ಅವರು ಮಕ್ಕಳಿಗೆ ಧರ್ಮಸ್ಥಳದಿಂದ ಸಿಗುವ ಶಿಷ್ಯವೇತನವನ್ನು ಒಳ್ಳೆಯ ಉದ್ದೇಶಕ್ಕೆ ಬಳಕೆ ಮಾಡಬೇಕು, ದುಂಧು ವೆಚ್ಚ ಮಾಡಬಾರದು. ದೇಶಕ್ಕೆ ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ತಿಳಿಸಿದರು.
ಕೌನ್ಸಿಲರ್ ದಯಾನಂದ್ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಧರ್ಮಸ್ಥಳದಿಂದ ಸಿಗುತ್ತಿರುವುದು ಸಂತೋಷದ ವಿಷಯ. ಇದನ್ನು ಸದ್ಬಳಕೆ ಮಾಡಬೇಕಾಗಿ ತಿಳಿಸಿದರು. ಮಹೇಶ್ ಕೆರಗೋಡು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ಕಾರ್ಯಕ್ರಮ ಮಾಡುವ ಬಂದಿದ್ದು. ಕಾರ್ಯಕ್ರಮಗಳು ಎಲ್ಲವೂ ಒಳ್ಳೆಯ ಉದ್ದೇಶದಿಂದ ಕೂಡಿದೆದೆ. ಅವುಗಳ ಬಗ್ಗೆ ತಿಳಿದು ಕಾರ್ಯ ಪ್ರವೃತ್ತರಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜನ ಜಾಗೃತಿ ವೇದಿಕೆ ಸದಸ್ಯ ಜೀವನ್‌ಗೌಡ, ಯೋಜನಾಧಿಕಾರಿ ಶಾರಿಕಾ ಉಪಸ್ಥಿತರಿದ್ದರು.