

ಕೊಪ್ಪ: ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ, ಯುವನಿಧಿ ಮತ್ತು ಅನ್ನಭಾಗ್ಯ ಯೋಜನೆಗೆಳಿಗೆ ಕೊಪ್ಪ ತಾಲೂಕಿನಲ್ಲಿ ಸುಮಾರು 106 ಕೋಟಿ ಅನುದಾನ ಬಳಸಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಶಿವಾನಂದ ಸ್ವಾಮಿ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ. ಸರ್ಕಾರದ ಸವಲತ್ತು ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕು ಎಂದರು.
ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಶಿಕುಮಾರ್, ಸದಸ್ಯರಾದ ಓಣಿತೋಟ ರತ್ನಾಕರ್, ಸಂತೋಷ, ನಾಗೇಂದ್ರ ಪ್ರಸಾದ್, ನರೇಂದ್ರ ಶೆಟ್ಟಿ, ಎಸ್.ಎ.ಅಬ್ದುಲ್ ಖಾದರ್, ವಾಸಂತಿ ಪಾಂಡುರಂಗ, ಆದರ್ಶ್, ಇಒ ನವೀನ್ ಕುಮಾರ್ ಇದ್ದರು.