

ಬಸವಕಲ್ಯಾಣ: ಶೈಕ್ಷಣಿಕ ಪ್ರಗತಿಯಲ್ಲಿ ಸಮಾಜದ ಪ್ರಗತಿ ಅಡಗಿದ್ದು, ಮಕ್ಕಳಿಗೆ ಉತ್ತಮ ಸಂಸ್ಕಾರದ ಜತೆಗೆ ಉನ್ನತ ಶಿಕ್ಷಣ ಕಲಿಸಿದಾಗ ಪ್ರಗತಿ ಸಾಧಿಸಲು ಸಾಧ್ಯ ಎಂದು ಮಹಾರಾಷ್ಟ್ರದ ಗುಂಜೋಟಿಯ ಚಿಂತಕ ವಿಷ್ಣುಪಂತ ಖಂಡಾಗಳೆ ಹೇಳಿದರು.
ತಾಲೂಕಿನ ಉಮ್ಮಾಪುರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತ್ಯ ಸಾಮ್ರಾಟ್ ಅಣ್ಣಾಭಾವು ಸಾಠೆ ಅವರ ೧೦೪ನೇ ಜಯಂತ್ಯುತ್ಸವ ಹಾಗೂ ಧ್ವಜ ಕಟ್ಟೆ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಲೋಕಶಾಹಿರ ಅಣ್ಣಾಭಾವು ಸಾಠೆ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಅವರ ವಿಚಾರಧಾರೆಯನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತವ ಕೆಲಸ ನಡೆಯಬೇಕು ಎಂದು ಹೇಳಿದರು.
ಅಖಿಲ ಭಾರತೀಯ ಪರಿವರ್ತನ ಮರಾಠಿ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸೂರ್ಯಕಾಂತ ಸಸಾನೆ ಮಾತನಾಡಿ, ಸಾಹಿತ್ಯ ಸಾಮ್ರಾಟ್ ಅಣ್ಣಾಭಾವು ಸಾಠೆ ಸಾಹಿತ್ಯ ಕ್ಷೇತ್ರ ಹಾಗೂ ಸಮಾಜ ಸುಧಾರಣೆಗೆ ನೀಡಿದ ಕೊಡುಗೆ ದೊಡ್ಡದು. ಅವರ ಸಾಹಿತ್ಯ ೨೭ ಭಷೆಗಳಿಗೆ ಭಾಷಾಂತರಗೊಂಡಿದೆ. ಅವರ ಸಾಹಿತ್ಯ, ವಿಚಾರ ಧಾರೆಯನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಕೆಲ ನಡೆಯಬೇಕು ಎಂದರು.
ಬೌದ್ಧ ಧಮ್ಮ ಪ್ರಚಾರಕ ಪೂಜ್ಯ ಮಿಜಿಂದ ಗುರೂಜಿ ಮಾತನಾಡಿ, ಮಹಾತ್ಮರ, ಮಹಾಪುರುಷರ ತತ್ವ-ಸಂದೇಶ, ವಿಚಾರ ಧಾರೆಯನ್ನು ತಿಳಿದುಕೊಂಡು ಜೀವನದಲ್ಲಿ ಪಾಲನೆ ಮಾಡಲು ಎಲ್ಲರೂ ಪ್ರಯತ್ನಿಸಬೇಕಾದ ಅವಶ್ಯಕತೆ ಇದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್, ಪ್ರಮುಖರಾದ ಪತ್ರಕರ್ತ ಸೂರ್ಯಕಾಂತ ಮದಕಟ್ಟಿ, ದಲಿತ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಸಿಕಂದರ ಶಿಂಧೆ, ಗ್ರಾಪಂ ಸದಸ್ಯ ಬಬಲು ಶೇಖ್, ಸಂತೋಷ ಗಾಯಕವಾಡ ಮಾತನಾಡಿದರು.
ಜಯಂತಿ ಕಮಿಟಿ ಅಧ್ಯಕ್ಷ ಸಂತೋಷ ಢಗಳೆ, ಅಶೋಕ ಢಗಳೆ, ಸಂಜು ಗೋಡಬೋಲೆ, ಗ್ರಾಪಂ ಉಪಾಧ್ಯಕ್ಷ ಜಿಲಾನಿ ಕೊಹಿರೇ, ಔರಾದ್ನ ಸುಧಾಕರ ಕೊಳ್ಳುರ್, ಭಾಲ್ಕಿಯ ಸುಧಾಕರ ಸೂರ್ಯವಂಶಿ. ವಾಮನ್ ಮದಾಳೆ, ರಮೇಶ ಉಮ್ಮಾಪುರೆ, ಪತ್ರಕರ್ತ ರಾಜೇಂದ್ರ ಗೋಖಲೆ, ಅಶೋಕ್ ಮಧಾಳೆ, ಸತೀಶ ಕಾಂಬಳೆ, ಲಕ್ಷಣ ಸಸ್ತಾಪುರೆ, ಯುವರಾಜ ಸೂರ್ಯವಂಶಿ, ಅಜಿತ್ ಸೂರ್ಯವಂಶಿ, ಮಾಣಿಕ ರೆಡ್ಡಿ, ಹರಿಹರ ಗೋಖಲೆ, ಶ್ರೀನಿವಾಸ ಸಾಕುಳೆ, ವಿಠಲ್ ಮೇಡೆ, ಸಚಿನ್ ಸೂರ್ಯವಂಶಿ, ಅಂಬಾದಾಸ ಢಗಳೆ, ನಾಮದೇವ ಸಾಕುಳೆ, ಲಹು ಢಗಲೇ, ದಗಡು ಗಾಯಕವಾಡ, ಮಹಾದೇವ ಗಾಡಿವಾನ ಹಾಗೂ ಪ್ರಮುಖರು ಭಾಗವಹಿಸಿದ್ದರು.