ಲೋಕ ಅದಾಲತ್​ನಲ್ಲಿ 1024 ಪ್ರಕರಣ ಇತ್ಯರ್ಥ

kmt Adalat
Published on

ಕುಮಟಾ: ಇಲ್ಲಿನ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ 1024 ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಲಾಗಿದೆ.

ಲೋಕ್ ಅದಾಲತ್​ನಲ್ಲಿ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿ ಆಗಬಹುದಾದ ಅಪರಾಧಿಕ ಪ್ರಕರಣಗಳು, ಕ್ರಿಮಿನಲ್, ಬ್ಯಾಂಕ್ ದಾವೆಗಳು, ಚೆಕ್ ಬೌನ್ಸಗಳು, ಮೋಟಾರು ವಾಹನ ವಿಮಾ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಯಿತು.

ಒಟ್ಟು 3356 ಪ್ರಕರಣಗಳನ್ನು ಲೋಕ ಅದಾಲತ್​ನಡಿ ತೆಗೆದುಕೊಳ್ಳಲಾಗಿದ್ದು, ಅದರಲ್ಲಿ ಚೆಕ್ ಅಮಾನ್ಯ ಪ್ರಕರಣ 77, ಅಪಘಾತ ವಿಮಾ ಪ್ರಕರಣ 77, ಸಿವಿಲ್ ಪ್ರಕರಣಗಳು ಒಟ್ಟು 80 ಹಾಗೂ ಉಳಿದ 944 ಕ್ರಿಮಿನಲ್ ಪ್ರಕರಣಗಳು ಸೇರಿದ್ದವು. ವಿಚಾರಣೆಯ ಬಳಿಕ 5 ಕೋಟಿ ರೂ ಗಳಿಗೂ ಹೆಚ್ಚು ದಂಡ ಹಾಗೂ ಪರಿಹಾರ ಆದೇಶಿಸಲಾಗಿದೆ.

ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೊಯಲಿನ್ ಮೆಂಡೊನ್ಸಾ, ಹಿರಿಯ ಸಿವಿಲ್ ನ್ಯಾಯಾಧೀಶೆ ಭಾರತಿ ಶಿವಪುತ್ರ ರಾಯಣ್ಣನವರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ವರ್ಷರ್ಶರೀ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಗೊಳಿಸಿದರು. ಸಂಧಾನಕಾರರಾಗಿ ವಕೀಲ ಎಂ.ಜಿ.ಸಭಾಹಿತ, ವಸಂತ ಎಸ್. ಪಟಗಾರ, ಉದಯಕುಮಾರ ನಾಯಕ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net