ಷೇರು ಮಾರುಕಟ್ಟೆಯಲ್ಲಿ ಹಣಹೂಡಿಕೆ ಹೆಸರಿನಲ್ಲಿ 10.15 ಲಕ್ಷ ರೂ. ವಂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಹಿರಿಯ ನಾಗರಿಕರೊಬ್ಬರು ಷೇರು ಮಾರುಕಟ್ಟೆಯಲ್ಲಿ ಹಣಹೂಡಿಕೆ ಹೆಸರಿನಲ್ಲಿ 10.15 ಲಕ್ಷ ರೂ. ವಂಚನೆಗೊಳಗಾಗಿದ್ದು,
ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
68 ವರ್ಷದ ದೂರುದಾರರಿಗೆ ಮಾರ್ಚ್ ತಿಂಗಳಲ್ಲಿ ರಿಯಾ ಐಯ್ಯರ್ ಎನ್ನುವ ಹೆಸರಿನಲ್ಲಿ ಅರಿಚಿತ ಸಂಖ್ಯೆಯಿಂದ ವಾಟ್ಸ್ ಆ್ಯಪ್ ಸಂದೇಶ ಬಂದಿದೆ. ಫಿಡಲಿಟಿ ಗ್ರೂಪ್ ಈಕ್ವಿಟಿ ಮ್ಯಾನೇಜ್ ಮೆಂಟ್ ಟೀಮ್ ಎನ್ನುವ ವಾಟ್ಸ್ ಆ್ಯಪ್ ಗ್ರೂಪ್ ಗೆ ಸೇರಿಸಿ, ಆನ್ ಲೈನ್ ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರಕಬಹುದೆಂದು ತಿಳಿಸಿದ್ದಾರೆ.
ಅನಂತರ ಲಿಂಕ್ ಕಳುಹಿಸಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಅದರಂತೆ ದೂರುದಾರರು ಲಿಂಕ್ ಗೆ ಲಾಗಿನ್ ಆಗಿದ್ದು, ಅದರಲ್ಲಿ ಅವರ ಹೆಸರಿನಲ್ಲಿ ಅಕೌಂಟ್ ಸೃಸ್ಟಿಸಿದ್ದಾರೆ. ಅದರಲ್ಲಿ ಹಣ ಹೂಡಿಕೆ ಮಾಡುವ ಆಪ್ಶನ್ ಕಂಡು ಬಂದಿದೆ. ಜೂ.25ರಿಂದ ಜು.9ರ ವರೆಗೆ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ ಖಾತೆಗೆ ಹಂತಹಂತವಾಗಿ 10.15 ಲಕ್ಷ ರೂ. ವರ್ಗಾಯಿಸಿದ್ದಾರೆ. ಆಗ ಆ್ಯಪ್ ನಲ್ಲಿ 34,10,149 ರೂ. ಜಮೆ ಆದಂತೆ ತೋರಿಸಿದೆ. ಆ ಹಣವನ್ನು ಹಿಂಪಡೆಯಲು ಮುಂದಾದಾಗ ಅಪರಿಚಿತ ವ್ಯಕ್ತಿಗಳು ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ವಾಟ್ಸ್ ಆ್ಯಪ್ ಮೂಲಕ ತಿಳಿಸಿದ್ದಾರೆ. ಇದರಿಂದ ಅನುಮಾನ ಬಂದು ಮಗಳಿಗೆ ವಿಚಾರ ತಿಳಿಸಿದಾಗ, ಆನ್ ಲೈನ್ ನಲ್ಲಿ ಮೋಸ ಹೋಗಿರುವ ವಿಚಾರ ಅರಿವಾಗಿದೆ.
ಮೋಸದಿಂದ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net