ವೈಕುಂಠ ಏಕಾದಶಿ ಅಂಗವಾಗಿ 101 ಎಡೆ ಸೇವೆ

12 bir 3
Published on

ಬೀರೂರು: ಪಟ್ಟಣದ ಸರಸ್ವತಿಪುರಂ ಬಡಾವಣೆಯ ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ವಾಮಿಗೆ ವೈಕುಂಠ ಏಕಾದಶಿ ಅಂಗವಾಗಿ 101ಎಡೆ ಸೇವೆ ನೆರವೇರಿತು. ಶ್ರೀ ಸ್ವಾಮಿ ಉತ್ಸವ ಮೂರ್ತಿಗೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ನೆರವೇರಿಸಿ ಸಪ್ತದ್ವಾರಗಳನ್ನು ನಿರ್ಮಿಸಲಾಗಿತ್ತು. ಸಂಜೆ ವಾದ್ಯಗೋಷ್ಠಿಗಳೊಂದಿಗೆ ಉತ್ಸವ ಮೂರ್ತಿಗಳಿಗೆ ಪಲ್ಲಕ್ಕಿ ಸೇವೆ ಮೂಲಕ ಉತ್ಸವ ನೆರವೇರಿಸಿ, ದಾಸಪ್ಪನವರ ಶಂಖು, ಗಂಟೆ ನಾದದೊಂದಿಗೆ ಬಾಳೆಹಣ್ಣು, ಹಾಲುತುಪ್ಪಗಳ ಮೂಲಕ 101 ಎಡೆ ಸೇವೆ ನಂತರ ಭಕ್ತರು ಸಪ್ತದ್ವಾರಗಳ ಮೂಲಕ ತೆರಳಿ ಸ್ವಾಮಿಯವರ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಪುರಸಭೆ ಅನುದಾನದಿಂದ ದೇವಾಲಯದ ಮುಂಭಾಗದಲ್ಲಿ ಸ್ಥಾಪಿಸಲಾದ ಹೈಮಾಸ್ಟ್ ವಿದ್ಯುತ್ ದೀಪವನ್ನು ಪುರಸಭೆ ಸದಸ್ಯ ಬಿ.ಕೆ.ಶಶಿಧರ್ ಉದ್ಘಾಟಿಸಿದರು.

ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ, ಸದಸ್ಯರಾದ ಶಾರದ, ಸುಮಿತ್ರ, ದೇವಸ್ಥಾನ ಸಮಿತಿ ಅಧ್ಯಕ್ಷ ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net