400 ರೂ.ಗೆ 1ಸಾವಿರ ಲೀ. ನೀರು

Ank strike
Published on

ಅಂಕೋಲಾ: ತಾಲೂಕಿನ ಸುಂಕಸಾಳ ಗ್ರಾಪಂ ವ್ಯಾಪ್ತಿಯ ಹೆಬ್ಬುಳದ ಹರಿಜನಕೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೂಡಲೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.

ಹರಿಜನಕೇರಿಯಲ್ಲಿ ಸುಮಾರು 35 ಕುಟುಂಬಗಳು ವಾಸಿಸುತ್ತಿವೆ. ಆದರೆ, ಗ್ರಾಪಂ ನಿರ್ಲಕ್ಷೃದಿಂದಾಗಿ ನೀರು ಸಿಗದೇ ಪರದಾಡುವಂತಾಗಿದೆ. ಹನಿ ನೀರಿಗೂ ತತ್ವಾರ ಉಂಟಾಗಿದೆ. ಬೋರ್‌ವೆಲ್ ಹಾಗೂ ಪಂಪ್‌ಸೆಟ್ ಹಾಳಾಗಿ 3 ವರ್ಷ ಕಳೆದರೂ ಜನಪ್ರ ತಿನಿಧಿಗಳಾಗಲೀ, ಅಧಿಕಾರಿಗಳಾಗಲಿ ಇತ್ತ ತಲೆ ಹಾಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಜೆಎಂ ಯೋಜನೆಯಡಿ ಪ್ರತಿ ಮನೆಗೂ ನಲ್ಲಿ ಜೋಡಿಸಲಾಗಿದೆ. ಆದರೆ, ಇದಕ್ಕೆ ನೀರು ಸರಬರಾಜಾಗುತ್ತಿಲ್ಲ.ಈ ಬಗ್ಗೆ ಹತ್ತಾರು ಬಾರಿ ಗ್ರಾಪಂನವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇಲ್ಲಿ ವಾಸಿಸುವ ಜನರು ಕೂಲಿ ಕಾರ್ಮಿಕರಾಗಿದ್ದಾರೆ. ಪ್ರತಿ ದಿನ ನೀರಿಗಾಗಿ ಕೂಲಿ ಬಿಟ್ಟು 2-3 ಕಿಮೀ ದೂರ ಹೋಗಿ ನೀರನ್ನು ತರಬೇಕಾದ ದುಸ್ಥಿತಿ ಇದೆ. ಅಲ್ಲದೆ, 1 ಸಾವಿರ ಲೀಟರ್ ನೀರಿಗೆ 400 ರೂ. ಕೊಟ್ಟು ಖರೀದಿಸುತ್ತಿದ್ದೇವೆ. ಕೂಡಲೇ ಶಾಸಕರು, ಜಿಲ್ಲಾಧಿಕಾರಿಗಳು ನಮ್ಮ ನೆರವಿಗೆ ಬರಬೇಕಾಗಿದೆ. ಇನ್ನೂ 2 ದಿನದಲ್ಲಿ ನ್ಯಾಯ ದೊರಕದೆ ಹೋದಲ್ಲಿ ಸುಂಕಸಾಳ ಗ್ರಾಪಂ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ನಾಗರಾಜ್ ಎನ್. ನಾಯ್ಕ, ಸಂತೋಷ ಎನ್. ನಾಯ್ಕ, ಸುನಂದಾ ಆನಂದು ಪಡ್ತಿ, ಕೃಷ್ಣಾ ಪಡ್ತಿ, ದಕ್ಕಿ ಈಶ್ವರ ಹರಿಕಂತ್ರ, ಆಶಾ ನಾಯ್ಕ, ಗಿರೀಜಾ ಆಗೇರ, ವತ್ಸಲಾ ಪಡ್ತಿ, ನೂತನ ಉದಯ ನಾಯ್ಕ, ರತ್ನಾವತಿ ಪಡ್ತಿ, ಸಣ್ಣಮ್ಮ ನಾಯ್ಕ, ಬುಧವಂತ ಆಗೇರ, ನೀಲಾ ಆಗೇರ, ಲತಾ ಪೆಡ್ನೇಕರ ಸೇರಿ ದಂತೆ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net