

ತುಮಕೂರು/ ಶಿರಾ: ಪೊಲೀಸರಿಗೆ 200 ಕೋಟಿ ರೂ.ವೆಚ್ಚದಲ್ಲಿ 100 ಹೊಸ ಪೊಲೀಸ್ ಠಾಣೆ ಮತ್ತು 20 ಸಾವಿರ ನೂತನ ವಸತಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ೂಷಿಸಿದರು.
ಶಿರಾ ನಗರದಲ್ಲಿ ಪೊಲೀಸ್ ಗೃಹ ನಿರ್ಮಾಣ ಮಂಡಳಿ ವತಿಯಿಂದ 2.64 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಡಿವೈಎಸ್ಪಿ, ಸಿಪಿಐ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸಂಚಾರಿ ಎಫ್ಎಸ್ಎಲ್ಗಳನ್ನೂ ಆರಂಭಿಸಲಾಗಿದ್ದು, ಪ್ರಕರಣ ನಡೆದ ಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸ್ಯಾಂಪಲ್ ಪಡೆದು ವರದಿ ನೀಡಲು ಪೊಲೀಸರಿಗೆ ಸಂಚಾರಿ ಲ್ಯಾಬ್ಗಳು ಸಹಕಾರಿಯಾಗಲಿವೆ ಎಂದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ವಿಭಾಗ ಬಲಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ಸೈಬರ್ ಠಾಣೆ ಪ್ರಾರಂಭಿಸಲಾಗಿದೆ ಎಂದರು.
ಸೈಬರ್ ಅಪರಾಧ ನಡೆದ 2 ಗಂಟೆಯೊಳಗಾಗಿ ಠಾಣೆಗೆ ತಿಳಿಸಿದಲ್ಲಿ ಅಕೌಂಟ್ಗಳನ್ನು ಫ್ರೀಜ್ ಮಾಡಿಸುವ ಅವಕಾಶವಿರುತ್ತದೆ ಈ ನಿಟ್ಟಿನಲ್ಲಿ ಬ್ಯಾಂಕ್ಗಳು ಸಹಕಾರ ನೀಡಲಿವೆ ಎಂದು ತಿಳಿಸಿದರು.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಪೊಲೀಸ್ ಠಾಣೆಯಲ್ಲಿ ಕನಿಷ್ಠ 3 ಮಹಿಳಾ ಕಾನ್ಸ್ಟೆಬಲ್ ಇರುವಂತೆ ನೋಡಿಕೊಳ್ಳಲಾಗುವುದು ಮತ್ತು ಪ್ರತಿಯೊಂದು ಜಿಲ್ಲೆಯಲ್ಲಿಯೂ ಮಹಿಳಾ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ ಎಂದರು.
ಶಾಸಕ ಡಾ.ಸಿ.ಎಂ.ರಾಜೇಶ್ಗೌಡ, ಎಂಎಲ್ಸಿ ಚಿದಾನಂದ ಎಂ.ಗೌಡ, ರೇಷ್ಮೆ ಮಂಡಳಿ ಅಧ್ಯಕ್ಷ ಎಸ್.ಆರ್.ಗೌಡ, ಡಿವೈಎಸ್ಪಿ ಕುಮಾರಪ್ಪ, ನಗರಸಭೆ ಅಧ್ಯ ಬಿ.ಅಂಜಿನಪ್ಪ, ನಾರು ನಿಗಮ ಮಂಡಳಿ ಅಧ್ಯ ಎಸ್.ಆರ್.ಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್, ತಹಸೀಲ್ದಾರ್ ಮಮತಾ, ಸೂಡಾ ಅಧ್ಯ ಮಾರುತೇಶ್, ಬಿಜೆಪಿ ತಾಲೂಕ ಅಧ್ಯ ವಿಜಯರಾಜ್, ಗ್ರಾಮೀಣ ಅಧ್ಯ ರಂಗಸ್ವಾಮಿ ಇದ್ದರು.
ವಿಧಿವಿಾನ ಪ್ರಯೋಗಾಲಯ ಆರಂಭ: ಶಿರಾ ತಾಲೂಕಿನಲ್ಲಿ ಮದ್ಯ ಅಕ್ರಮ ಮಾರಾಟ ಹಾಗೂ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಶ್ರೀದಲ್ಲಿ ಕ್ರಮ ಕೈಗೊಳ್ಳಲಿದೆ. ವಿಧಿವಿಾನ ಪ್ರಯೋಗಾಲಯದಿಂದ ವರದಿ ಬರಲು ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುವುದರಿಂದ ಅಪರಾಧ ಪತ್ತೆ ವಿಳಂಬವಾಗುತ್ತಿತ್ತು. ತನಿಖೆ ಚುರುಕುಗೊಳಿಸಲು ಈ ವರ್ಷ ಬಳ್ಳಾರಿ ಹಾಗೂ ಹುಬ್ಬಳ್ಳಿಯಲ್ಲಿ ವಿಧಿವಿಾನ ಪ್ರಯೋಗಾಲಯ ಪ್ರಾರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ಪ್ರಾರಂಭಿಸಲಿದ್ದು, ಸಂಚಾರಿ ವಿಧಿವಿಾನ ಪ್ರಯೋಗಾಲಯ ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಎಫ್ಎಸ್ಎಲ್ ಲ್ಯಾಬ್ ಬಲಗೊಳಿಸುವ ನಿಟ್ಟಿನಲ್ಲಿ ವಿಧಿ&ವಿಜ್ಞಾನ ಪ್ರಯೋಗಾಲಯ ಹೆಚ್ಚಿಸಲಾಗುತ್ತಿದೆ. ಬಳ್ಳಾರಿ, ಹುಬ್ಬಳ್ಳಿ ಜಿಲ್ಲೆಯಲ್ಲಿ ಎಫ್ಎಸ್ಎಲ್ ಪ್ರಯೋಗಾಲಯ ಮತ್ತು ಮುಂದಿನ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಲ್ಯಾಬ್ ನಿರ್ಮಿಸಲಾಗುವುದು. > ಆರಗ ಜ್ಞಾನೇಂದ್ರ, ಗೃಹ ಸಚಿವ