100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ

ydg1
ಶಹಾಪುರದಲ್ಲಿ ಐಡಿಎಸ್‌ಎಂಟಿ ಯೋಜನೆ ಲೇಔಟ್‌ನ್ನು ಜಿ¯್ಲÁ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿ ಮಾತನಾಡಿದರು. ಉಮಾ ಕಾಂತ ಹಳ್ಳೆ, ಪೌರಾಯುಕ್ತ ರಮೇಶ ಬಡಿಗೇರ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ತಿಪ್ಪಣ್ಣ, ನಗರ ಆಶ್ರಯ ಸಮಿತಿ ಅಧ್ಯP್ಷÀ ವಸಂತ ಸುರಪುರ, ನಗರ ಸಭೆ ಎಇಇ ನಾನಾಸಾಬ್ ಇತರರಿದ್ದರು.
Published on

ಶಹಾಪುರ: ತಾಲೂಕಿನ ಜನರ ಆರೋಗ್ಯದ ಹಿತ ದೃಷ್ಟಿಯಿಂದ ನಗರದಲ್ಲಿ ಹೆಚ್ಚುವರಿಯಾಗಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಇಲ್ಲಿನ ಬಾಪುಗೌಡ ಬಡಾವಣೆಯಲ್ಲಿ ಶನಿವಾರ ಐಡಿಎಸ್‌ಎಂಟಿ ಲೇಔಟ್ ಉದ್ಘಾಟಿಸಿ ಮಾತನಾಡಿದ ಅವರು, ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ನಗರದಲ್ಲಿ ನೂರು ಹಾಸಿಗೆ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆ ಇದೆ. ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ಒದಗಿಸಲು ಕಷ್ಟವಾಗುತ್ತಿದೆ. ಇನ್ನೂ ಹೆಚ್ಚಿನ ಸಾಮರ್ಥ್ಯದ ಆಸ್ಪತ್ರೆ ಅಗತ್ಯ ಇರುವ ಕಾರಣ ಹೆಚ್ಚುವರಿಯಾಗಿ 100 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ಮತ್ತು ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

ಲೇಔಟ್‌ನಲ್ಲಿ 84 ನಿವೇಶನಗಳಿದ್ದು, ಆದಷ್ಟು ಬೇಗ ಹರಾಜು ಪ್ರಕ್ರಿಯೆ ನಡೆಸಲಾಗುವುದು. 19 ಮೂಲೆ ನಿವೇಶನ ಗುರುತಿಸಿ ಅವುಗಳಿಂದ ಬಂದ ಹೆಚ್ಚಿನ ಹಣವನ್ನು ಅಭಿವೃದ್ಧಿಗೆ ಬಳಸಲಾಗುವುದು ಎಂಬ ಸುಳಿವು ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹತ್ತಿರ ಮೂರು ಎಕರೆ ಪ್ರದೇಶದಲ್ಲಿ 20 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಕಾಮಗಾರಿಗೆ 9.5 ಕೋಟಿ ಮಂಜೂರಾಗಿದೆ. ಜಮೀನು ಶಿP್ಷÀಣ ಇಲಾಖೆಗೆ ಒಳಪಟ್ಟಿದ್ದರಿಂದ ಈ ಜಮೀನು ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಮಂಜೂರಾತಿ ದೊರೆಯಲಿದ್ದು, ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಉಮಾಕಾಂತ ಹಳ್ಳೆ, ಪೌರಾಯುಕ್ತ ರಮೇಶ ಬಡಿಗೇರ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ತಿಪ್ಪಣ್ಣ, ನಗರ ಆಶ್ರಯ ಸಮಿತಿ ಅಧ್ಯP್ಷÀ ವಸಂತ ಸುರಪುರ, ನಗರ ಸಭೆಯ ಎಇಇ ನಾನಾಸಾಬ್, ಪರಿಸರ ಅಭಿಯಂತರ ಹರೀಶ್ ಸಜ್ಜನ್ ಶೆಟ್ಟಿ, ಪಿಐ ಎಸ್.ಎಂ. ಪಾಟೀಲï ಇತರರಿದ್ದರು.

ಸರ್ಕಾರಕ್ಕೆ ಕೋಟ್ಯಂತರ ರೂ. ಲಾಭ: 1974ರಲ್ಲಿ 94 ಎಕರೆ ಜಮೀನಿತ್ತು. ಇದರಲ್ಲಿ ಬಹುತೇಕ ಜಮೀನು ವಸತಿ ನಿರ್ಮಾಣಕ್ಕೆ ಬಳಸಲಾಗಿದೆ. ಇನ್ನು 11 ಎಕರೆ ಜಮೀನು ಉಳಿದಿರುವುದು ಯಾರಿಗೂ ತಿಳಿದಿರಲಿಲ್ಲ. ನಗರಸಭೆ, ಆಶ್ರಯ ಸಮಿತಿ ಮತ್ತು ಕಂದಾಯ ಇಲಾಖೆ ಪ್ರಯತ್ನದಿಂದ ಈ ಜಮೀನು ಲಭಿಸಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಲಾಭವಾಗಿದೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ಈ ಜಮೀನು ಹುಡುಕುವಲ್ಲಿ ಕಾರಣರಾದ ಅಧಿಕಾರಿ ಮತ್ತು ಸಮಿತಿಗೆ ಧನ್ಯವಾದ. ಈಗ 7 ಎಕರೆ ಜಮೀನಿನಲ್ಲಿ ಲೇಔಟ್ ನಿರ್ಮಿಸಲಾಗಿದೆ. 84 ಪ್ಲಾಟ್‌ಗಳಿವೆ. ಇದರಲ್ಲಿ ಸಾರ್ವಜನಿಕ ಉದ್ಯಾನವನ ಹಾಗೂ ಸಿಎ ಸೈಟ್‌ಗಾಗಿ ಬಿಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net