

ತ್ಯಾಮಗೊಂಡ್ಲು : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ತ್ಯಾಮಗೊಂಡ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ನಿರ್ಮಾಣ್ ಸಂಸ್ಥೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 100 ವಿದ್ಯಾರ್ಥಿಗಳಿಗೆ ಅಂತಿಮ ಪರೀೆ ಮುಗಿಸಿ ಉದ್ಯೋಗಕ್ಕೆ ಆಗಮಿಸುವಂತೆ ಪ್ರವೇಶ ಪತ್ರ ನೀಡಲಾಯಿತು. ಕ್ರೆಡಿಟ್ ಅಸೆಸ್ ಗ್ರಾಮೀಣ್ ಲಿ, ಸನ್ ಬೆಟ್, ಮುತೂಟ್ ಫೈನಾನ್ಸ್, ಎಚ್ಆರ್ಎಚ್ ನೆಕ್ಸ್ $್ಟ ಸಲೂಷನ್ಸ್, ಕ್ರಿಯೇಟಿವ್ ಇಂಜನಿಯರ್ಸ್, ಉನ್ನತಿ, ಅಟ್ಲಾಂಟ ಎಲಿವೇಟರ್ಸ್ ಆ್ಯಂಡ್ ಎಸ್ಕಲೇಟರ್ಸ್ ಇಂಡಿಯ ಪ್ರೆ.ಲಿ., ಟಾಟಾ ಎಐ, ಏರೋಸ್ಪೇಸ್ ಪ್ರೆ.ಲಿ., ಎಮಿನೆಂಟ್ ಎಚ್ಆರ್ ಸಲೂಷನ್ಸ್ ಪ್ರೆ.ಲಿ ಸೇರಿ ಹಲವು ಕಂಪನಿಗಳು ಭಾಗವಹಿಸಿದ್ದವು.
226 ಉದ್ಯೋಗ ಆಕಾಂಗಳು ನೋಂದಣಿ ಮಾಡಿಸಿದ್ದರು. ಅದರಲ್ಲಿ ಕಾಲೇಜು 100 ವಿದ್ಯಾರ್ಥಿಗಳಿಗೆ ಉದ್ಯೋಗ ಪ್ರವೇಶ ಪತ್ರ ನೀಡಲಾಯಿತು. ಇನ್ನೂಳಿದ 76 ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಯಿತು. ಯಾವುದೇ ಕೆಲಸವಿರಲಿ ಕಷ್ಟವಾದರೂ ಇಷ್ಟಪಟ್ಟು ಮಾಡಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೂ ಸಂವಹನ ಕಲೆಯಲ್ಲಿ ಮಾತ್ರ ವ್ಯತ್ಯಾಸವಿದೆ. ಅದನ್ನು ಬಿಟ್ಟರೆ ಬೇರೆಲ್ಲ ವಿಷಯಗಳಲ್ಲೂ ಸಮಾನರಾಗಿದ್ದಾರೆ. ಆದ್ದರಿಂದ ಆ ಒಂದು ವಿಷಯದಲ್ಲಿ ಪರಿಣಿತಿ ಸಾಧಿಸಿದರೆ ಪ್ರಮುಖ ಕಂಪನಿಗಳಲ್ಲಿ ಉನ್ನತ ಹುದ್ದೆ ಗಿಟ್ಟಿಸಿಕೊಳ್ಳಬಹುದು ಎಂದು ಸ್ಕೆಟರ್ ಕಂಪನಿ ಮಾಲೀಕ ಕುಮಾರ್ ಹೇಳಿದರು. ಪರಿಶ್ರಮ ಇಲ್ಲದಿದ್ದರೇ ಯಶಸ್ಸು ಗಳಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಜೀವನದಲ್ಲಿ ಆಶಾವಾದಿ ಹಾಗೂ ಸ್ವಾವಲಂಬಿಗಳಾಗಿ ಇತರರಿಗೆ ಮಾದರಿಯಾಗಿ ಬದುಕಬೇಕು ಎಂದು ಪ್ರಾಂಶುಪಾಲ ಪೊ.ತಿಮ್ಮಹನುಮಯ್ಯ ಹೇಳಿದರು. ನಿವೃತ್ತ ಅಗ್ನಿಶಾಮಕ ಅಧಿಕಾರಿ ರಾಮಕೃಷ್ಣ, ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಸಂಚಾಲಕ ರಮೇಶ್.ಸಿ.ಜಿ., ಡಾ.ಕೆ.ದಿವಾಕರ್, ಡಾ.ಎಸ್.ಮಂಜುನಾಥ್, ಪೊ.ಆರ್.ಎನ್.ರವಿ, ಸಹ ಪ್ರಾಧ್ಯಾಪಕರು, ಸಿಬ್ಬಂದಿ ಇದ್ದರು.