ನಾಟ್ಯ ಶಾಲೆಗೆ ಶೇ.೧೦೦ರಷ್ಟು ಫಲಿತಾಂಶ

natya
Published on

ಮಡಿಕೇರಿ: ಕಲಾಕಾವ್ಯ ನಾಟ್ಯ ಶಾಲೆಗೆ ಭರತನಾಟ್ಯ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಬಂದಿದ್ದು, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಗುರುಗಳಾದ ವಿದುಷಿ ಕಾವ್ಯಶ್ರೀ ಕಪಿಲ್ ದುಗ್ಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿ.ಜಿ.ವ್ರಿಷ್ಟಿ ಶೇ.೯೩.೨೫ ಅಂಕ, ಕೆ.ಜಿ.ಸಾಹಿತ್ಯ ಶೇ.೯೨, ಅಮೆ ಜೀವಿಕ ಶೇ.೮೬, ಯುಕ್ತಿ ಮತ್ತಮ್ಮ ಶೇ.೮೨.೫, ಪಿ.ಎಂ.ಸಾಕ್ಷಿ ಶೇ,೭೭.೫ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net