

ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಎಲ್ಲ 68 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಸತತ 8ನೇ ಬಾರಿಗೆ ಶೇ.100 ಫಲಿತಾಂಶ ದಾಖಲಿಸಿಕೊಂಡಿದೆ.
68 ವಿದ್ಯಾರ್ಥಿಗಳ ಪೈಕಿ 30 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, 38 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಪ್ರಾಪ್ತಿ ಪಿ.ವಿ. 592 ಅಂಕ ಪಡೆದು ರಾಜ್ಯಕ್ಕೆ 8ನೇ ಸ್ಥಾನ ಪಡೆದಿದ್ದಾರೆ. ಇವರು ಪೆರಾಬೆ ಗ್ರಾಮದ ವೀರಪ್ಪ ಗೌಡ ಮತ್ತು ನಳಿನಾಕ್ಷಿ ಕೆ. ದಂಪತಿಯ ಪುತ್ರಿ. 586 ಅಂಕ ಪಡೆದಿರುವ ಕವನ ರಾವ್ ಕಾಲೇಜಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಅವರು ಉರುವಾಲು ಗ್ರಾಮದ ಮನೋಹರ್ ರಾವ್ ಮತ್ತು ಆಶಾಲತಾ ದಂಪತಿ ಪುತ್ರಿ. 585 ಅಂಕ ಪಡೆದ ಅಫ್ರ ಕಾಲೇಜಿಗೆ ತೃತೀಯ ಸ್ಥಾನಿಯಾಗಿ ಹೊರ ಹೊಮ್ಮಿದ್ದಾರೆ. ಅವರು ಉಪ್ಪಿನಂಗಡಿ ನಿವಾಸಿ ಅಬ್ದುಲ್ ಲತೀಫ್ ಕೆ.ಐ. ಮತ್ತು ಅಫ್‌ಸತ್ ಎಸ್.ಯು. ದಂಪತಿಯ ಪುತ್ರಿ. ಸಾಧಕರನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಕರುಣಾಕರ ಸುವರ್ಣ ಅಭಿನಂದಿಸಿದ್ದಾರೆ.