ಪುಷ್ಪ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Sathvik G
ಸಾತ್ವಿಕ್
Published on

ಪಿರಿಯಾಪಟ್ಟಣ: ಸಿಬಿಎಸ್‌ಸಿ 10ನೇ ತರಗತಿ ಪರೀಕ್ಷೆಯಲ್ಲಿ ಪಟ್ಟಣದ ಪುಷ್ಪ ಆಂಗ್ಲ ಮಾಧ್ಯಮ ಶಾಲೆ ಶೇ.100ರಷ್ಟು ಫಲಿತಾಂಶ ಪಡೆದಿದೆ.

ಒಟ್ಟು 45 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅತ್ಯುನ್ನತ ಶ್ರೇಣಿಯಲ್ಲಿ 24 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 15 ವಿದ್ಯಾರ್ಥಿಗಳು ಹಾಗೂ ದ್ವಿತೀಯ ದರ್ಜೆಯಲ್ಲಿ 6 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಜಿ.ಸಾತ್ವಿಕ್ 500 ಅಂಕಗಳಿಗೆ 465 ಅಂಕ ಗಳಿಸಿ ಶೇ.93ರ ಫಲಿತಾಂಶ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಪಿ.ಎಂ.ಸನ್ಮಿತಾ 462 ಅಂಕ ಗಳಿಸಿ ದ್ವಿತೀಯ ಸ್ಥಾನ, ಆರ್.ಸೃಜನ್ ಕುಮಾರ್ 458 ಅಂಕ ಗಳಿಸಿ ತೃತೀಯ, 448 ಅಂಕ ಗಳಿಸಿದ ಎಚ್.ಎಂ.ಚುವನಾ ಮತ್ತು ಜೆ.ಡಿ.ಕುಶಾಲ್ 4 ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಫಾ.ಥಾಮಸ್, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net