ಎಂಎಸ್‌ಆರ್ ಇಂಗ್ಲಿಷ್ ಶಾಲೆಗೆ ಶೇ.100 ಫಲಿತಾಂಶ

KDR sss
ಅಲ್ಬಿನಾ ಫಿರ್ದೋಸ್
Published on

ಕಡೂರು: ಪಟ್ಟಣದ ಎಂಎಸ್‌ಆರ್ ಇಂಗ್ಲಿಷ್ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ ಎಂದು ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಎನ್.ಚಂದ್ರಶೇಖರ್ ತಿಳಿಸಿದರು.

ಅಲ್ಬಿನಾ ಫಿರ್ದೋಸ್ 605 ಅಂಕ ಗಳಿಸಿ ಶಾಲೆಗೆ ಮೊದಲ ಸ್ಥಾನ ಹಾಗೂ ಕಡೂರು ಶೈಕ್ಷಣಿಕ ವಲಯದಲ್ಲಿ ಎರಡನೇ ಸ್ಥಾನ ಪಡೆದಿದ್ದಾಳೆ. ಐಶ್ವರ್ಯಾ ಆರಾಧ್ಯ 604 ಅಂಕ ಗಳಿಸಿ ಎರಡನೇ ಸ್ಥಾನ, ವರ್ಷಿಣಿ 593 ಅಂಕ ಗಳಿಸಿ ಮೂರನೇ ಸ್ಥಾನ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾಳೆ. 26 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅತ್ಯುನ್ನತ ಶ್ರೇಣಿಯಲ್ಲಿ 9, ಪ್ರಥಮ ದರ್ಜೆಯಲ್ಲಿ 13, ದ್ವಿತೀಯ ದರ್ಜೆಯಲ್ಲಿ 4 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ ಎಂದು ಹೇಳಿದರು. ಶಾಲೆ ಗೌರವಾಧ್ಯಕ್ಷ ಕೆ.ವಿ.ವಾಸು, ಕಾರ್ಯದರ್ಶಿ ಕೆ.ಜಿ.ಅಣ್ಣಪ್ಪ, ಖಜಾಂಚಿ ಸಿ.ಎಲ್.ದೇವರಾಜು, ನಿರ್ದೇಶಕರಾದ ವಿರೂಪಾಕ್ಷ, ಎಸ್.ಎಂ. ವಿಜಯಕುಮಾರ್, ಶೇಖರಯ್ಯ, ರಕ್ಷಿತ್ ಹರೀಶ್, ಪ್ರಾಚಾರ್ಯ ಬಿ.ಓಂಕಾರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net