ಜವಾಹರ ನವೋದಯ ವಿದ್ಯಾಲಯಕ್ಕೆ ಶೇ.೧೦೦ ಫಲಿತಾಂಶ

download
Published on

ಮಡಿಕೇರಿ: ಕೊಡಗು ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯದ ಜವಾಹರ ನವೋದಯ ವಿದ್ಯಾಲಯದ ೨೦೨೩ನೇ ಸಾಲಿನ ಸಿಬಿಎಸ್‌ಇ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ೧೦ ಮತ್ತು ೧೨ನೇ ತರಗತಿಗಳಲ್ಲಿ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಉತ್ತೀರ್ಣರಾಗಿದ್ದಾರೆ ಎಂದು ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಪಂಕಜಾಕ್ಷನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಫಲಿತಾಂಶದಲ್ಲಿ ವಿದ್ಯಾಲಯ ಕೊಡಗು ಜಿಲ್ಲೆಯಲ್ಲಿ ಎಂದಿನಂತೆ ಮುನ್ನಡೆ ಸಾಧಿಸಿದೆ. ಹನ್ನೆರಡನೇ ತರಗತಿಯಲ್ಲಿ ೭೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ೫೪ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.


ವಿಜ್ಞಾನ ವಿಭಾಗದಲ್ಲಿ ಎಸ್.ಯು.ಸಾತ್ವಿಕ ಶೇ.೯೪.೪(ಪ್ರ), ಎಸ್.ಪಿ.ವೈಶಿಣಿ ಶೇ.೯೦.೮(ದ್ವಿ), ಬಿ.ಎಚ್.ಸಾಕ್ಷಿ ಶೇ.೯೦(ತೃ) ಸ್ಥಾನ ಪಡೆದಿದ್ದಾರೆ. ಹಾಗೆಯೇ ವಾಣಿಜ್ಯ ವಿಭಾಗದಲ್ಲಿ ಬಿ.ಜಿ.ದುರ್ಗೇಶ್ ಶೇ.೯೫.೪(ಪ್ರ), ಎಚ್.ಪಿ.ರಕ್ಷಯ ಶೇ.೯೪(ದ್ವಿ), ಎಂ.ಕಾವೇರಿ ಶೇ.೯೦(ತೃ) ಸ್ಥಾನ ಪಡೆದಿದ್ದಾರೆ.
ಹತ್ತನೇ ತರಗತಿಯಲ್ಲಿ ೭೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ೬೮ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ೩೯ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕೆ.ಜೆ.ನಿಧಿ ಶೇ.೯೭(ಪ್ರ), ಎಸ್.ಪ್ರತೀಕ್ಷಾ ಶೇ.೯೪.೮(ದ್ವಿ) ಎಂ.ಎ.ರಿಶಿಕಾ ಶೇ.೯೨.೮(ತೃ) ಸ್ಥಾನ ಪಡೆದಿದ್ದಾರೆ.


೧೨ ನೇ ತರಗತಿ ವಾಣಿಜ್ಯ ವಿಭಾಗದ ಶೀಘ್ರಲಿಪಿ ವಿಷಯದಲ್ಲಿ ೬ ವಿದ್ಯಾರ್ಥಿಗಳು ೧೦೦ ಕ್ಕೆ ೧೦೦ ಅಂಕ ಪಡೆದು ಗಣನೀಯ ಸಾಧನೆ ಮಾಡಿದ್ದಾರೆ. ಅಲ್ಲದೇ ವಿಷಯ ಸರಾಸರಿಯಲ್ಲಿ ವಿದ್ಯಾಲಯವು ದೇಶದಲ್ಲೇ ಮೊದಲ ಸ್ಥಾನ ಪಡೆದು ವಿದ್ಯಾಲಯದ ಹೆಸರನ್ನು ಉತ್ತುಂಗಕ್ಕೇರಿಸಿದ್ದಾರೆ. ಉನ್ನತ ಸಾಧನೆ ಮಾಡಿದ ಮತ್ತು ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು, ಹೆಚ್ಚಿನ ಅಂಕ ಪಡೆದು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪ್ರಾಚಾರ್ಯರು, ಶಿಕ್ಷಕರು, ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net