ಜ್ಞಾನರಶ್ಮಿ ಶಾಲೆಗೆ ಶೇ.೧೦೦ ಫಲಿತಾಂಶ

9 ckm 10
ಚಿಕ್ಕಮಗಳೂರು ಉಪ್ಪಳ್ಳಿ ಸಮೀಪದ ಜ್ಞಾನರಶ್ಮಿ ಆಂಗ್ಯಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ ಸಂಭ್ರಮಿಸಲಾಯಿತು.
Published on

ಚಿಕ್ಕಮಗಳೂರು: ನಗರದ ಹಳೇ ಉಪ್ಪಳ್ಳಿ ಸಮೀಪದ ಜ್ಞಾನರಶ್ಮಿ ಆಂಗ್ಯಮಾಧ್ಯಮ ಶಾಲೆಗೆ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಲಭಿಸಿದೆ.

ಶಾಲೆಯಿಂದ ೪೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೯ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, ೩೮ ಪ್ರಥಮ ಸ್ಥಾನ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದಾರೆ. ಎ.ಅಂಕಿತ ೫೯೪ ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ, ಜೋಯಾ ಖಾನಂ ೫೭೫ ಅಂಕ ಗಳಿಸಿ ದ್ವಿತೀಯ ಹಾಗೂ ಎಸ್.ಮೆಹಕ್ ೫೬೭ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ. ಕನ್ನಡ ವಿಷಯದಲ್ಲಿ ಎ.ಅಂಕಿತ ೧೨೫ಕ್ಕೆ ೧೨೫ ಅಂಕ ಹಾಗೂ ಹಿಂದಿ ವಿಷಯದಲ್ಲಿ ಜೋಯಾ ಖಾನಂ ೧೦೦ಕ್ಕೆ ೧೦೦ ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ ಎಂದು ಶಾಲೆಯ ಆಡಳಿತಾಧಿಕಾರಿ ಲಿಖಿತ್ ನಂದಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net