

ಮೈಸೂರು:ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿನ ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆಯು ಶೇ.100 ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ.
ಶಾಲೆಯ ಒಟ್ಟು 10 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದು, 08 ವಿದ್ಯಾರ್ಥಿಗಳು ಸಿ+ ಶ್ರೇಣಿಯಲ್ಲಿ 01 ವಿಧ್ಯಾರ್ಥಿ ಬಿ+ ಶ್ರೇಣಿ ಹಾಗೂ 01 ವಿಧ್ಯಾರ್ಥಿ ಬಿ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಒಟ್ಟು 425 ಅಂಕಗಳಿಗೆ ಪರೀಕ್ಷೆ ನಡೆದಿದ್ದು, ದರ್ಶನ್ 240 ಅಂಕಗಳು, ಕಾರ್ತಿಕ್ ಕುಮಾರ 248 ಅಂಕಗಳು, ಮದಿಹಾ ಭಾನು 309 ಅಂಕಗಳು, ಪ್ರಜ್ವಲ್ 248 ಅಂಕಗಳು, ರಘು 270 ಅಂಕಗಳು, ರಮೇಶ್ 252 ಅಂಕಗಳು, ರವಿದೇವ್ಕರ್ 254 ಅಂಕಗಳು, ಶ್ರೇಯಸ್ ಕುಮಾರ್ ಎಂ.ಆರ್. 254 ಅಂಕಗಳು ,ವಿ ಸಂತೋಷ್ 250 ಅಂಕಗಳು ಹಾಗೂ ವಿಕಾಸ್ ಡಿ 247 ಅಂಕಗಳನ್ನು ಪಡೆದಿರುತ್ತಾರೆ ಎಂದು ತಿಲಕ ನಗರದ ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.