ಬೆಂಗಳೂರು-ಮೈಸೂರು ಹೆದ್ದಾರಿ ವೇಗಮಿತಿ 100 ಕಿ.ಮೀ ಅಷ್ಟೇ: ಎಡಿಜಿಪಿ ಅಲೋಕ್‌ಕುಮಾರ್ ಸ್ಪಷ್ಟ ನುಡಿ

3
Published on

ಮಂಡ್ಯ: ಹೆದ್ದಾರಿಯಲ್ಲಿ ವೇಗದ ಮಿತಿ ಇಲ್ಲವೆಂದು ತಪ್ಪು ತಿಳಿದುಕೊಳ್ಳಲಾಗಿದೆ. ಆದರೆ ಹೆದ್ದಾರಿಯಲ್ಲಿ 100 ಕಿ.ಮೀಗೆ ವೇಗದ ಮಿತಿ ಇರಲಿದೆ ಎಂದು ಎಡಿಜಿಪಿ ಅಲೋಕ್‌ಕುಮಾರ್ ಹೇಳಿದರು.

ನಗರದ ಹೊರವಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು 120 ಕಿ.ಮೀಗೆ ವೇಗದ ಮಿತಿ ಇತ್ತು. ಆದರೆ ಮದ್ರಾಸ್ ಹೈಕೋರ್ಟ್ ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಇಷ್ಟೊಂದು ವೇಗವಿದ್ದರೆ ಅಪಘಾತವಾಗಲಿದೆ ಎಂದಿತ್ತು. ಈ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರದವರು ನಿಯಮ ಬದಲಿಸಿ 100 ಕಿ.ಮೀಗೆ ವೇಗವನ್ನು ಮಿತಿಗೊಳಿಸಿದ್ದಾರೆ. ಆದ್ದರಿಂದ ಎಲ್ಲರೂ ತಪ್ಪದೇ ನಿಯಮ ಪಾಲನೆ ಮಾಡಲೇಬೇಕು ಎಂದರು.

ಇನ್ನು ಬೆ-ಮೈ ಹೆದ್ದಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ 97 ಕಡೆ ಬಸ್ ಶೆಲ್ಟರ್ ಹಾಗೂ ಅಗತ್ಯವಿರುವೆಡೆ ಶೌಚಗೃಹ ನಿರ್ಮಾಣ ಮಾಡುವ ಬಗ್ಗೆ ಹೆದ್ದಾರಿ ಪ್ರಾಧಿಕಾರ ಮಾಹಿತಿ ನೀಡಿದೆ. ಅವರು ಆದಷ್ಟು ಬೇಗ ಮಾಡಬೇಕೆನ್ನುವುದು ನಮ್ಮ ಸೂಚನೆ. ಅಪಘಾತಗಳ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ನೀಡಿರುವ ಸೂಚನೆಯನ್ನು ಪ್ರಾಧಿಕಾರ ತ್ವರಿತವಾಗಿ ಮಾಡಬೇಕು. ಇಲ್ಲದಿದ್ದರೆ ಅವರ ಮೇಲೆಯೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net