100 ಐಕ್ಯೂಬ್ ಇಲೆಕ್ಟ್ರಿಕ್ ವಾಹನ ವಿತರಣೆ

17Anand12
ನಗರದಲ್ಲಿ ಭಾನುವಾರ ಟಿವಿಎಸ್ ಬ್ಲೂ ರಿಬ್ಬನ್ ಸೆಲೆಬ್ರೇಶನ್ ಇವಿ ದ್ವಿಚಕ್ರ ವಾಹನಗಳ ಮೆಗಾ ಡೆಲಿವರಿ ಸಮಾರಂಭ ಜರುಗಿತು. ರಾಜೇಂದ್ರ ದೇಸಾಯಿ , ವೆದ್ಯನಾಥನ್, ಲೋಹಿತ್, ರಾಜೇಶ ಭೋಸಗಿ, ಬಸವರಾಜ ತಂಗಡಿ, ವಿನಯಕುಮಾರ ಬಾಳಿಕಾಯಿ ಇತರರಿದ್ದರು.
Published on

ಬೆಳಗಾವಿ: ಉತ್ತಮ ಗುಣಮಟ್ಟದ ಸೇವೆಯಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗುವ ಮೂಲಕ ನಗರದ ಹೆಟೆಕ್ ಟಿವಿಎಸ್ ಡೀಲರ್‌ಗಳು ಒಂದೇ ದಿನದಲ್ಲಿ 100 ಐಕ್ಯೂಬ್ ಇಲೆಕ್ಟ್ರಿಕ್ ವಾಹನಗಳನ್ನು ವಿತರಿಸುವ ಮೂಲಕ ಪ್ರಮುಖ ಮೆಲಿಗಲ್ಲು ಸಾಸಿದೆ ಎಂದು ಹೆಟೆಕ್ ಮೋಟಾರ್ಸ್ ನಿರ್ದೇಶಕ ರಾಜೇಂದ್ರ ದೇಸಾಯಿ ಸಂತಸ ವ್ಯಕ್ತಪಡಿಸಿದರು.

ನಗರದ ಪೈ ರೆಸಾರ್ಟ್ಸ್‌ನಲ್ಲಿ ಹೆಟೆಕ್ ಮೋಟಾರ್ಸ್ ಆ್ಯಂಡ್ ಆಟೋಮೊಬೆಲ್ಸ್ ಪ್ರೈ.ಲಿ. ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಟಿವಿಎಸ್ ಬ್ಲೂ ರಿಬ್ಬನ್ ಸೆಲೆಬ್ರೇಶನ್ ಇವಿ ದ್ವಿಚಕ್ರ ವಾಹನಗಳ ಮೆಗಾ ಡೆಲಿವರಿ ಸಮಾರಂಭದಲ್ಲಿ ಅವರು ಮಾತನಾಡಿದರು. ಟಿವಿಎಸ್ ಮೋಟಾರ್ಸ್‌ನ ಮತ್ತೊಂದು ಮಹತ್ವದ ಸಾಧನೆ ಎಂದರೆ ಕಂಪನಿಯು ಈಗ ದೇಶಾದ್ಯಂತ 5 ಲಕ್ಷಕ್ಕೂ ಹೆಚ್ಚು ಐಕ್ಯೂಬ್ ಇವಿಗಳನ್ನು ಮಾರಾಟ ಮಾಡಿದೆ ಎಂದರು.

ಹೆಟೆಕ್ ಮೋಟಾರ್ಸ್ ಜನವರಿ 2020ರಿಂದ ಇಲ್ಲಿಯವರೆಗೆ 5,000ಕ್ಕೂ ಹೆಚ್ಚು ಐಕ್ಯೂಬ್ ವಾಹನಗಳನ್ನು ಮಾರಾಟ ಮಾಡಿದ್ದು ಮತ್ತು ಟಿವಿಎಸ್ ದ್ವಿಚಕ್ರ ವಾಹನ ಮಾರಾಟಕ್ಕಾಗಿ ಉತ್ತರ ಕರ್ನಾಟಕದ ಪ್ರಮುಖ ಡೀಲರ್ ಆಗಿ ಹೊರಹೊಮ್ಮಿದೆ ಎಂದರು.

ಕೇರಳದ ಟಿವಿಎಸ್ ಇವಿ ಸೇಲ್ಸ್ ಮುಖ್ಯಸ್ಥ ವೆದ್ಯನಾಥನ್, ಸೇಲ್ಸ್ ವ್ಯವಸ್ಥಾಪಕ ಲೋಹಿತ್,ಹೆಟೆಕ್ ಮೋಟಾರ್ಸ್ ಆ್ಯಂಡ್ ಆಟೋಮೊಬೆಲ್ಸ್ ಪ್ರೈ.ಲಿ. ನಿರ್ದೇಶಕ ರಾಜೇಶ ಭೋಸಗಿ, ಬಸವರಾಜ ತಂಗಡಿ, ವಿನಯ ಕುಮಾರ ಬಾಳಿಕಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net