ರಸ್ತೆ ನಿರ್ಮಾಣಕ್ಕೆ 100 ಕೋಟಿ. ಅನುದಾನ

T.D. rajegowda- Congress Sringeri (1)
Published on

ಕೊಪ್ಪ: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಅವುಗಳ ದುರಸ್ತಿಗೆ ಲೋಕೋಪಯೋಗಿ ಇಲಾಖೆ, ಸಿಆರ್‌ಎ್, ಜಿಪಂ ಸೇರಿದಂತೆ ವಿವಿಧ ಇಲಾಖೆಗಳಿಂದ 100 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಐದು ತಿಂಗಳ ಮಳೆಯಿಂದ ರಸ್ತೆಗಳು ಗುಂಡಿಗಳು ಬಿದ್ದಿದೆ. ಆರಂಭದಲ್ಲಿ ಗುಂಡಿಮುಚ್ಚುವ ಕೆಲಸ ಮಾಡಲಾಯಿತು. ನಿರಂತರ ಮಳೆಗೆ ಪ್ಯಾಚ್ ಹಾಕಿರುವುದು ಸಹ ಎದ್ದು ಬಂದಿದೆ. ಆದ್ದರಿಂದ ನೂತನ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಮುತ್ತಿನಕೊಪ್ಪ ಸಮೀಪದ ಕೊರಲುಕೊಪ್ಪದಿಂದ ಕೊಪ್ಪಕ್ಕೆ 19 ಕೋಟಿ ಮಂಜೂರಾಗಿದೆ. ಕೊಪ್ಪದಿಂದ ಜಯಪುರದವರೆಗೆ 6 ಕೋಟಿ, ಆಲ್ದೂರಿನಿಂದ ಬಾಳೆಹೊನ್ನೂರುವರೆಗೆ 10 ಕೋಟಿ ಅನುದಾನ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದೆ ಎಂದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೃತರಾದ ವಿದ್ಯಾರ್ಥಿ ಶಮಿತ ಸಾವಿನಲ್ಲಿ ಹಸ್ತಕ್ಷೇಪ ನಡೆಸಿಲ್ಲ,ಅನಾಮಿಕ ಬರೆದ ಪತ್ರದ ಬಗ್ಗೆ ನನಗೆ ಮಾಹಿತಿ ಇಲ್ಲ. ತನಿಖೆ ನಡೆಸಿ ವರದಿ ಬಂದಿದೆ, ನಾನು ಇನ್ನೂ ವರದಿ ಓದಿಲ್ಲ. ವಿರೋಧ ಪಕ್ಷದವರಿಗೆ ವರದಿ ಬಗ್ಗೆ ಅನುಮಾನವಿದ್ದರೆ ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ ಉನ್ನತ ಮಟ್ಟದ ತನಿಖೆ ನಡೆಸಲಿ ಎಂದರು.

ಕಳೆದ ನಾಲೈದು ವರ್ಷಗಳಿಂದ ಶೃಂಗೇರಿ ಕ್ಷೇತ್ರದಲ್ಲಿ ಕಾಡಾನೆಯಿಂದ ಪ್ರಾಣ ಹಾನಿ, ರೈತರ ಕೃಷಿ ಜಮೀನುಗಳಿಗಗೆ ಸಾಕಷ್ಟು ಹಾನಿಗಳು ಸಂಭವಿಸಿದೆ. ಈಗಾಗಲೇ ಮೂರು ಕಾಡಾನೆಗಳನ್ನು ಹಿಡಿಯಲಾಗಿದೆ. ಕೊಪ್ಪ, ಶೃಂಗೇರಿ, ಎನ್.ಆರ್ ಪುರದ ಸಂಕ್ಸೆ, ಗುಡ್ಡೆಹಳ್ಳ ಭಾಗದಲ್ಲಿ ಇರುವ ಆನೆಗಳನ್ನು ಶೀಘ್ರದಲ್ಲಿ ಸೆರೆ ಹಿಡಿಯಲಾಗುತ್ತದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net