ಎರಡು ವರ್ಷದೊಳಗೆ ನೂರು ಹಾಸಿಗೆ ಆಸ್ಪತ್ರೆ ಸಿದ್ಧ

Building foundation stone laying
Published on

ಶಿರಹಟ್ಟಿ: ಹಿಂದುಳಿದ ತಾಲೂಕು ಪಟ್ಟಿಯಲ್ಲಿರುವ ಶಿರಹಟ್ಟಿಯನ್ನು ಗುರುತಿಸಿ ನೂರು ಹಾಸಿಗೆ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ಪಟ್ಟಣದ ವರವಿ ರಸ್ತೆ ಪಕ್ಕದಲ್ಲಿ ಮಂಗಳವಾರ ನಬಾರ್ಡ್ ಯೋಜನೆಯಡಿ 100 ಹಾಸಿಗೆಗಳ ತಾಲೂಕು ಸಾರ್ವಜನಿಕ ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ಹಾಗೂ ಮುಂಡರಗಿ ತಾಲೂಕಿನ ಆಸ್ಪತ್ರೆ ಆವರಣದಲ್ಲಿ ಬಿಪಿಎಚ್‌ಯು ಲ್ಯಾಬ್ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವಸತಿ ಗೃಹ ಉದ್ಘಾಟನಾ ಸಮಾರಂಭ, ಆರೋಗ್ಯ ಯೋಜನೆ ಚಾಲನೆ ಹಾಗೂ ಆಶಾ ಕೈಪಿಡಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಟ್ಟಡದ ಜತೆಗೆ ಆಸ್ಪತ್ರೆಗೆ ಬೇಕಾದ ಎಲ್ಲ ಸಲಕರಣೆಗಳ ಪ್ಯಾಕೇಜ್ ನೀಡಲಾಗಿದೆ. ಆಸ್ಪತ್ರೆ ನಿರ್ಮಿಸಲು 37 ಕೋಟಿ ರೂ. ಮಂಜೂರಾಗಿದ್ದು, ಪ್ರಾರಂಭಿಕವಾಗಿ 5 ಕೋಟಿ ಬಿಡುಗಡೆ ಮಾಡಲಾಗಿದೆ. ಎರಡು ವರ್ಷದೊಳಗೆ ಕಟ್ಟಡ ಸಿದ್ಧವಾಗಲಿದೆ. ನಮ್ಮ ಆಡಳಿತದಲ್ಲಿಯೇ ಆಸ್ಪತ್ರೆ ಉದ್ಘಾಟನೆಯಾಗುತ್ತದೆ. ಅಭಿವೃದ್ಧಿಗೆ ಸಾಕಷ್ಟು ಹಣ ಇದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಮಾತನಾಡಿ, ನೂರು ಹಾಸಿಗೆ ಆಸ್ಪತ್ರೆಗೆ ಅನುದಾನ ತರುವಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕಾರಣವಾಗಿದೆ. ಶಿರಹಟ್ಟಿ ಕ್ಷೇತ್ರಕ್ಕೆ ಬೇಕಾದ ಮೂಲಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಚಂದ್ರು ಕೆ. ಲಮಾಣಿ ಮಾತನಾಡಿ, ನಮ್ಮ ಕ್ಷೇತ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಶಿರಹಟ್ಟಿ ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳಿಗಾಗಿ ವಿಶೇಷ ಆಸ್ಪತ್ರೆ ಅಗತ್ಯವಿದೆ. ಲಕ್ಷ್ಮೇಶ್ವರ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಯನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದೆ ಎಂದರು.

ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಸುಜಾತಾ ದೊಡ್ಡಮನಿ, ಅಕ್ಬರ್‌ಸಾಬ್ ಭಗವತಿ, ಅನಂದಸ್ವಾಮಿ ಗಡ್ಡದೇವರಮಠ, ಪಪಂ ಅಧ್ಯಕ್ಷ ದೇವಕ್ಷ ಗುಡಿಮಣಿ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ವೀರಯ್ಯ ಮರಪತಿ, ಅಧಿಕಾರಿಗಳಾದ ಹರ್ಷಗುಪ್ತ, ರಮಣದೀಪ್ ಚೌಧರಿ, ಶಿವಕುಮಾರ ಕೆ., ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಎಸ್ಪಿ ರೋಹನ್ ಜಗದೀಶ, ಡಾ. ವಸಂತಕುಮಾರ, ಕೆ. ಮುಕ್ಕಣ್ಣ ನಾಯಕ, ಹುಮಾಯುನ್ ಮಾಗಡಿ, ನಾಗರಾಜ ಲಕ್ಕುಂಡಿ, ಫಕೀರೇಶ ರಟ್ಟಿಹಳ್ಳಿ, ಜಾನು ಲಮಾಣಿ, ನಂದಾ ಪಲ್ಲೇದ, ತಿಮ್ಮರೆಡ್ಡಿ ಮರಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ, ತಾಲೂಕು ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ, ಮುಂಡರಗಿ ತಾಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ, ಡಾ. ಜಿ.ಪಿ. ಗೋಪಾಲರಾಜ್, ವಿ.ವಿ. ಕಪ್ಪತ್ತನವರ, ಸಿಸಿ ನೂರಶೆಟ್ಟರ, ದೀಪಕ್ ಕಪ್ಪತ್ತನವರ, ಚನ್ನವ್ವ ಮೈಲಾರಿ, ಶಂಕರ ಮರಾಠೆ, ಮಹೇಶ ಬಡ್ನಿ, ಮೋಹನ ಗುತ್ತೆಮ್ಮನವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net