10 ಸಾವಿರ ಕೋಳಿಮರಿ ದಫನ್

20-RNR-01
Published on

ರಾಣೆಬೆನ್ನೂರ: ಕರೊನಾ ವೈರಸ್ ಹಾಗೂ ಹಕ್ಕಿ ಜ್ವರ ಹರಡುವ ಭೀತಿ ಹಿನ್ನೆಲೆಯಲ್ಲಿ ಹತ್ತು ಸಾವಿರ ಕೋಳಿ ಮರಿಗಳನ್ನು ಮಣ್ಣಿನಲ್ಲಿ ಮುಚ್ಚಿ ಹಾಕಿರುವ ಘಟನೆ ತಾಲೂಕಿನ ಯಕ್ಲಾಸಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ರೈತ ನಾಗರಾಜ ಎಂಬುವರಿಗೆ ಸೇರಿದ ಜಮೀನಿನಲ್ಲಿ ಕೋಳಿ ಸಾಕಾಣಿಕೆ ಮಾಡಲಾಗುತ್ತಿತ್ತು. ಹರಿಹರ ಭಾಗದಲ್ಲಿ ಹಕ್ಕಿ ಜ್ವರ ಹರಡುವಿಕೆ ತೀವ್ರಗೊಂಡ ಕಾರಣ ಒಂದು ತಿಂಗಳು ಸಾಕಿದ ಕೋಳಿ ಮರಿಗಳನ್ನು ತಮ್ಮ ಜಮೀನಿನಲ್ಲಿ ಗುಂಡಿ ತೆಗೆದು ಮುಚ್ಚಿ ಹಾಕಿದ್ದಾರೆ.

ಇದರಿಂದಾಗಿ ರೈತನಿಗೆ 2 ಲಕ್ಷ ರೂ.ಗೂ ಅಧಿಕ ಹಾನಿಯಾಗಿದೆ. ‘ಕೋಳಿ ಫಾಮ್ರ್ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಆದರೀಗ ಏಕಾಏಕಿ ಎಲ್ಲವನ್ನೂ ಮಣ್ಣಿನಲ್ಲಿ ಮುಚ್ಚಿ ಹಾಕಿದ್ದು, ದಿಕ್ಕು ತೋಚದಂತಾಗಿದೆ. ಸರ್ಕಾರ ನೆರವು ನೀಡಬೇಕು’ ಎಂದು ರೈತ ನಾಗರಾಜ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net