10 ಸಾಧಕರಿಗೆ ಶಿಲ್ಪಶ್ರೀ ಪ್ರಶಸ್ತಿ ಪ್ರದಾನ

15
Published on

ಮೈಸೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿ ವತಿಯಿಂದ ನೀಡುವ 2022ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿಯನ್ನು 10 ಜನ ಸಾಧಕರಿಗೆ ಪ್ರದಾನ ಮಾಡಲಾಯಿತು.

ಅಕಾಡೆಮಿಯ ವತಿಯಿಂದ ನಗರದ ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಇವರಿಗೆ ತಲಾ 25 ಸಾವಿರ ರೂ.ನಗದು, ಸ್ಮರಣಿಕೆ, ಪ್ರಶಂಸನಾ ಪತ್ರದೊಂದಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪುರಸ್ಕೃತರು:
ಶಿಲ್ಪಸಾಧಕರಾದ ಎನ್.ರಾಘವೇಂದ್ರ(ಗದಗ), ಕೆ.ಸತೀಶ್‌ಆಚಾರ್ಯ(ಉಡುಪಿ), ಕೆ.ಸುರೇಶ್ ಆಚಾರ್ಯ(ವಿಜಯಪುರ), ನಾಗೇಂದ್ರ ಎಸ್.ಕಮ್ಮಾರ್(ಧಾರವಾಡ), ಅಶೋಕ ಆರ್.ಬಡಿಗೇರ(ಬೆಳಗಾವಿ), ಜಿ.ವಿ.ಶಿವಕುಮಾರ್(ಬೆಂಗಳೂರು), ನಾಗರಾಜ ಬಿ.ಕಂಬಾರ(ಯಾದಗಿರಿ), ವೀರೇಶ್ ಜಿ.ಮಾಯಾಚಾರ್ಯ(ಬಾಗಲಕೋಟೆ), ನಿಂಗಪ್ಪ ಡಿ.ಕೇರಿ(ಕಲಬುರಗಿ) ಮತ್ತು ಡಿ.ಎನ್.ಚಂದ್ರಶೇಖರ್(ಶಿವಮೊಗ್ಗ) ಅವರು ಪ್ರಶಸ್ತಿ ಪುರಸ್ಕೃತರು.

ವಿಶ್ವಬ್ರಾಹ್ಮಣ ಮಹಾಸಂಸ್ಥಾನಮಠದ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಯನಗರ ಸಾಮ್ರಾಜ್ಯದ ರಾಜವಂಶಸ್ಥ ಶ್ರೀಕೃಷ್ಣದೇವರಾಯ, ಚಿತ್ರನಟ ಸುಚೇಂದ್ರ ಪ್ರಸಾದ್, ಅಕಾಡೆಮಿಯ ಅಧ್ಯಕ್ಷ ವೀರಣ್ಣ ಮಾ.ಅರ್ಕಸಾಲಿ, ರಿಜಿಸ್ಟ್ರರ್ ಆರ್.ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ರಂಗಾಯಣ ನಿರ್ದೇಶಕಿ ನಿರ್ಮಲ ಮಠಪತಿ ಇನ್ನಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net