ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ 10 ವರ್ಷಗಳ ಪೂರ್ವದಲ್ಲಿ ಪಡೆದಿರುವ ವಿಶಿಷ್ಟ ಗುರುತಿನ ಸಂಖ್ಯೆ ಆಧಾರ್ ನವೀಕರಣ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.
ಆಧಾರ್ ನೊಂದಣಿ ಕಾರ್ಯವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಕಳೆದ 10 ವರ್ಷಗಳ ಪೂರ್ವದಲ್ಲಿ ಪಡೆದಿರುವ ವಿಶಿಷ್ಟ ಗುರತಿನ ಸಂಖ್ಯೆಯ ಆಧಾರ್ ನವೀಕರಣ ಮಾಡಿಸಿಕೊಳ್ಳುವಂತೆ ನವದೆಹಲಿಯ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯು.ಐ.ಡಿ.ಅ.ಐ) ನಿರ್ದೇಶನ ನೀಡಿದೆ.
ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯಾದ್ಯಂತ 10 ವರ್ಷಗಳ ಪೂರ್ವದಲ್ಲಿ ಪಡೆದಿರುವ ಆಧಾರ್ ನೋಂದಣಿದಾರರು ತಮ್ಮ ಆಧಾರ್ ಸಂಖ್ಯೆಯನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಹೊರಡಿಸಿರುವ ಪ್ರಮುಖ ದಾಖಲೆಗಳಾದ ವಿಳಾಸ ಪುರಾವೆ, ವ್ಯಕ್ತಿಯ ಗುರುತಿನ ಪುರಾವೆಗಳ ಜೊತೆಗೆ ಪ್ರಮುಖ ಮಾಹಿತಿಗಳನ್ನು ಸದ್ಯದ ದಾಖಲೆಗಳಿಗೆ ಅನುಗುಣವಾಗಿ ಡಿಸೆಂಬರ್ 14ರೊಳಗೆ ಉಚಿತವಾಗಿ ನವೀಕರಣ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.