10 ಲಕ್ಷ ರೂ. ವೆಚ್ಚದಲ್ಲಿ ನೆಲಹಾಸು ನಿರ್ಮಾಣ

2inapur1
Published on

ಐನಾಪುರ: ಚುನಾವಣೆಯಲ್ಲಿ ರಾಜಕೀಯ ಮಾಡುವುದು ಸಹಜ. ನಂತರ ಪಕ್ಷಾತೀತವಾಗಿ ಪಟ್ಟಣದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದು ಸಿದ್ದೇಶ್ವರ ಪಿಕೆಪಿಎಸ್‌ನ ಅಧ್ಯಕ್ಷ ಪ್ರವೀಣ ಗಾಣಿಗೇರ ಹೇಳಿದರು.

ಪಟ್ಟಣದ ವಾರ್ಡ್ ನಂ. 5ರಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿತ್ತಿರುವ ನೆಲಹಾಸು (ಪೇವಿಂಗ್ ಬ್ಲಾಕ್) ಹಾಗೂ ಸಿ.ಸಿ ರಸ್ತೆ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, 15ನೇ ಹಣಕಾಸು ಯೋಜನೆಯಡಿ 96 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ, ಒಳಚರಂಡಿ, ಸಿ.ಸಿ.ರಸ್ತೆ, ನೆಲಹಾಸು ಹಾಗೂ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗುಣಮಟ್ಟದ ಕಾಮಗಾರಿಗೆ ಸಾರ್ವಜನಿಕರು ನಿಗಾವಹಿಸಬೇಕು ಎಂದರು.

ಅರುಣ ಗಾಣಿಗೇರ, ಸಂಜು ಭಿರಡಿ, ಸುರೇಶ ಗಾಣಿಗೇರ, ದಾದಾ ಜಂತೆನ್ನವರ, ಕುಮಾರ ಜಯಕರ, ಸುನೀಲ ಅವಟಿ, ರಾಮಚಂದ್ರ ಹವಳಪ್ಪಗೋಳ, ಸಮೀರ ಕುಚನೂರೆ, ಅನಿಲ ಸತ್ತಿ, ವಿಕಾಶ ಪಾಂಡ್ರೆ, ಗುಂಡು ಖವಟಕೊಪ್ಪ, ಸಂಜು ಕುಸನಾಳೆ, ಪ್ರದೀಪ ಲಿಂಬಿಕಾಯಿ. ಪಾರೀಸ ಬಿಸ್ಟಾನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net