

ಚಿತ್ರದುರ್ಗ: ನಗರದ ಮೆದೇಹಳ್ಳಿ ರಸ್ತೆಯ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಜ.10ರಂದು ಪ್ರಥಮ ಬಾರಿಗೆ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇವಾಲಯದ ಪ್ರಧಾನ ಅರ್ಚಕರಾದ ಸತೀಶ್‌ಸ್ವಾಮಿ, ಆನಂದ್‌ಸ್ವಾಮಿ ನೇತೃತ್ವದಲ್ಲಿ ಅಂದು ಬೆಳಗ್ಗೆ 6 ರಿಂದ ಪ್ರಕಾರೋತ್ಸವ, ಉತ್ತರಭಾಗಿಲು ಪೂಜೆ, ಸತ್ಯನಾರಾಯಣ ದೇವರಿಗೆ ಅಲಂಕಾರ, ಅಭಿಷೇಕ ಹಾಗೂ ಪೂಜೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9342310469ನ್ನು ಸಂಪರ್ಕಿಸುವಂತೆ ದೇವಾಲಯ ಸಮಿತಿ ಅಧ್ಯಕ್ಷ ಶರಣ್‌ಕುಮಾರ್ ತಿಳಿಸಿದ್ದಾರೆ.