

ಚಿತ್ರದುರ್ಗ: ಜಿಲ್ಲಾದ್ಯಂತ ಭಾನುವಾರ ರಾತ್ರಿ ಸುರಿದ ಮಳೆಗೆ 10 ಮನೆಗಳು ಭಾಗಶಃ, 2 ದೊಡ್ಡ, 3 ಸಣ್ಣ ಜಾನುವಾರು ಸೇರಿ 6.11 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ.
ಹೊಳಲ್ಕೆರೆ-8, ಹೊಸದುರ್ಗ, ಹಿರಿಯೂರು ತಾಲೂಕಿನಲ್ಲಿ ತಲಾ 1 ಮನೆಗೆ ಭಾಗಶಃ ಹಾನಿ ಉಂಟಾಗಿದೆ.
ಚಳ್ಳಕೆರೆ ತಾಲೂಕಿನ ಡಿ.ಮರಿಕುಂಟೆಯಲ್ಲಿ 51.6 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾದ ಪ್ರದೇಶವಾಗಿದೆ.
ಚಳ್ಳಕೆರೆಯಲ್ಲಿ 29.6 ಮಿ.ಮೀ, ಪರಶುರಾಂಪುರ 31.8, ತಳಕು 27.2, ಹೊಳಲ್ಕೆರೆ 13.2, ಚಿಕ್ಕಜಾಜೂರು 12.6, ಎಚ್.ಡಿ.ಪುರ 11.2, ಮೊಳಕಾಲ್ಮೂರು 23, ರಾಯಾಪುರ 15.6, ಬಿ.ಜಿ.ಕೆರೆ 37, ಬಾಗೂರು, ಮಾಡದಕೆರೆ ತಲಾ 17.2, ಮತ್ತೋಡು 14.2, ಶ್ರೀರಾಂಪುರ 35, ಚಿತ್ರದುರ್ಗ-1ರಲ್ಲಿ 14.6, ಚಿತ್ರದುರ್ಗ-2ರಲ್ಲಿ 21, ಐನಹಳ್ಳಿ 11.2, ಹಿರಿಯೂರು 31.2, ಇಕ್ಕನೂರು 15, ಈಶ್ವರಗೆರೆ 20.2, ಬಬ್ಬೂರು 11, ಸೂಗೂರು 31.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.